20 ಲಕ್ಷ ಕೋಟಿ ರೂಪಾಯಿ ನಿರ್ಮಲಾ ಸೀತಾರಾಮನ್ ಮನೆಯಲ್ಲಿ ಕ್ವಾರಂಟೈನ್ ಆಗಿರಬೇಕು: ಕಾಂಗ್ರೆಸ್ ವ್ಯಂಗ್ಯ - uttara kannada congress outrage on central government
ಕೇಂದ್ರದಿಂದ ಘೋಷಣೆಯಾಗಿರುವ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಈವರೆಗೂ ಯಾವ ಕ್ಷೇತ್ರಕ್ಕೂ ತಲುಪಿಲ್ಲ. ಪ್ಯಾಕೇಜ್ ಜನರಿಂದ ಸೋಶಿಯಲ್ ಡಿಸ್ಟ್ನ್ಸ್ ಮೆಂಟೇನ್ ಮಾಡಿದಂತೆ ಕಾಣುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಶಿರಸಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಯಾವ ಕ್ಷೇತ್ರಕ್ಕೂ ತಲುಪಿಲ್ಲ. ಅದು ಅವರ ಮನೆಯಲ್ಲೇ ಕ್ವಾರಂಟೈನ್ ಆಗಿದೆಯೇ? ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಶ್ನಿಸಿದೆ.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ಮಾಧ್ಯಮ ವಕ್ತಾರ ದೀಪಕ್ ದೊಡ್ಡೂರು, ಬಿಜೆಪಿ ಸರ್ಕಾರ ಜನರ ಭಾವನೆಗಳ ಜತೆ ಆಟವಾಡುತ್ತಿದೆ. ಆರ್ಥಿಕತೆ ಕುಸಿತ ಕಂಡರೂ ಅದರ ಏರಿಕೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಅವರ ಪ್ಯಾಕೇಜ್ ಜನರಿಂದ ಸೋಶಿಯಲ್ ಡಿಸ್ಟ್ನ್ಸ್ ಮೆಂಟೇನ್ ಮಾಡಿದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.