ಕಾರವಾರ: ಟೆಂಪೋ ಪಲ್ಟಿಯಾಗಿ 15 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕುಮಟಾ ತಾಲೂಕಿನ ಹಂದಿಗೋಣ ಸರ್ಕಾರಿ ಶಾಲೆ ಸಮೀಪ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊನ್ನಾವರದಿಂದ ಕುಮಟಾ ಕಡೆ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ಟೆಂಪೊ ಪಲ್ಟಿಯಾಗಿದೆ. ಪರಿಣಾಮ ಅದರಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಕುಮಟಾದಲ್ಲಿ ಟೆಂಪೊ ಪಲ್ಟಿಯಾಗಿ 15 ಕ್ಕೂ ಜನರಿಗೆ ಗಾಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಶಾಂತ ನಾಯಕ ಕೊಡ್ಕಣಿ ಮಣಿಪಾಲ್ ಹಾಗೂ ಗುಂಡಬಾಳದ ಲೋಕರಾಜ್ ಜೈನ್, ಹೊಳೆಗದ್ದೆಯ ರೇವತಿ ಭಂಡಾರಿ ಎಂಬುವರನ್ನು ಹೊನ್ನಾವರ ಸೈಂಟ್ ಇಗ್ನೇಷಿಯಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದ ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸ್ಥಳಕ್ಕೆ ಕುಮಟಾ ಸಿಪಿಐ ಪರಮೇಶ್ವರ್ ಗುನಗ ಹಾಗೂ ಕ್ರೈಂ ಪಿಎಸ್ಐ ಸುಧಾ ಅಘನಾಶಿನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.