ಕರ್ನಾಟಕ

karnataka

ETV Bharat / state

ಕಾರವಾರ: ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೂರ್ಯಗ್ರಹಣ ವೀಕ್ಷಿಸಿದ ವಿದ್ಯಾರ್ಥಿಗಳು - ಸೂರ್ಯಗ್ರಹಣ ವೀಕ್ಷಿಸಿದ ವಿದ್ಯಾರ್ಥಿಗಳು

ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ, ಸನ್ ಟೆಲಿಸ್ಕೋಪ್​​, ಪಿನ್​ಹೋಲ್ ಕ್ಯಾಮರಾ ಹಾಗೂ ಸನ್ ಸ್ಪೆಕ್ಟ್ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸೂರ್ಯಗ್ರಹಣ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.

Students watched the eclipse at the Regional Science Center
ಕಾರವಾರ: ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೂರ್ಯಗ್ರಹಣ ವೀಕ್ಷಿಸಿದ ವಿದ್ಯಾರ್ಥಿಗಳು

By

Published : Jun 21, 2020, 5:33 PM IST

ಕಾರವಾರ(ಉತ್ತರಕನ್ನಡ):ಪ್ರಸಕ್ತ ವರ್ಷದ ಮೊದಲ ಸೂರ್ಯಗ್ರಹಣ ಇಂದು ಗೋಚರಿಸಿತು. ಕಾರವಾರದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಕಾರವಾರ: ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೂರ್ಯಗ್ರಹಣ ವೀಕ್ಷಿಸಿದ ವಿದ್ಯಾರ್ಥಿಗಳು

ಕಾರವಾರದ ಜಿಲ್ಲಾ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸನ್ ಟೆಲಿಸ್ಕೋಪ್​​, ಪಿನ್​ಹೋಲ್ ಕ್ಯಾಮರಾ ಹಾಗೂ ಸನ್ ಸ್ಪೆಕ್ಟ್ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಪರೂಪದ ಗ್ರಹಣ ವೀಕ್ಷಿಸಿದ್ರು. ಪ್ರತಿ 10 ನಿಮಿಷಕ್ಕೊಮ್ಮೆ ಸೂರ್ಯಗ್ರಹಣದ ಚಿತ್ರಣದ ಮ್ಯಾಪ್ ತೆಗೆದ ವಿದ್ಯಾರ್ಥಿಗಳು, ಅದನ್ನು ದಾಖಲಿಸುವ ಪ್ರಯತ್ನ ನಡೆಸಿದರು.

ಈ ಕುರಿತು ಮಾತನಾಡಿದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಪವನ ದೇಶಪಾಂಡೆ ಅವರು, ಸೂರ್ಯಗ್ರಹಣ ವೀಕ್ಷಣೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಹಣ ಮಧ್ಯಾಹ್ನ 1.24 ರವರೆಗೆ ಗೋಚರಿಸಿದ್ದು, ಬರಿಗಣ್ಣಿನಿಂದ ನೋಡುವುದು ಅಪಾಯಕಾರಿಯಾಗಿದೆ. ಈ ಕಾರಣದಿಂದಲೇ ವಿಜ್ಞಾನ ಕೇಂದ್ರದಲ್ಲಿ ಸನ್ ಟೆಲಿಸ್ಕೋಪ್, ಪಿನ್ ಹೋಲ್ ಕ್ಯಾಮರಾ ಹಾಗೂ ಸನ್ ಸ್ಪೆಕ್ಟ್ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details