ಶಿರಸಿ(ಉತ್ತರಕನ್ನಡ):ಅಂಕೋಲಾದ ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ನೀಡುವ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಯನ್ನು ಶಿರಸಿಯ ಉಪನ್ಯಾಸಕಿ ಮಾಧವಿ ಭಂಡಾರಿ ಕೆರೆಕೋಣ ಅವರಿಗೆ ನೀಡಿ ಗೌರವಿಸಲಾಗಿದೆ.
ಶಿರಸಿಯ ಮಾಧವಿ ಭಂಡಾರಿಗೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ - ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ
ಶಿರಸಿಯ ಉಪನ್ಯಾಸಕಿ ಮಾಧವಿ ಭಂಡಾರಿ ಕೆರೆಕೋಣ ಅವರಿಗೆ ಅಂಕೋಲಾದ ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ನೀಡುವ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೋವಿಡ್ ಹಿನ್ನೆಲೆ, ಉಪನ್ಯಾಸಕಿ ಮಾಧವಿ ಭಂಡಾರಿ ಅವರ ಶಿರಸಿಯ ಮನೆಯಲ್ಲಿಯೇ ಕಾರ್ಯಕ್ರಮವನ್ನು ಆಯೋಜಿಸಿ, ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವೇಳೆ ಮಾತನಾಡಿದ ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಕಾರ್ಯದರ್ಶಿ ಸಾಹಿತಿ ವಿಷ್ಣು ನಾಯ್ಕ್, ಈ ವರ್ಷದಿಂದ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಯನ್ನು ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಎಂದು ಸಮಿತಿ ಘೋಷಿಸಿದೆ. ಅದು ನಾವೆಲ್ಲರೂ ಗೌರವಿಸುವ ಡಾ.ಆರ್.ವಿ.ಭಂಡಾರಿಯವರ ಮಗಳಾದ ಮಾಧವಿಯವರಿಗೆ ಬಂದಿವುದು ಸಂತಸದ ವಿಷಯ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉಪನ್ಯಾಸಕಿ ಮಾಧವಿ ಭಂಡಾರಿ, ದಿನಕರ ದೇಸಾಯಿ ಮತ್ತು ಆರ್.ವಿ.ಭಂಡಾರಿ ನನ್ನೆರಡು ಆದರ್ಶಗಳು. ಜಗತ್ತಿನ ಸಮಸ್ತರ ಬದುಕಿಗಾಗಿ ಬದುಕು ಬರಹಗಳಲ್ಲಿ ಪ್ರೀತಿ ಎರೆದಿದ್ದಾರೆ. ನನ್ನ ಬರಹಗಳೂ ಆ ಹಾದಿಯ ಹುಡುಕಾಟವಾಗಿದೆ. ಪ್ರತಿ ಕವನ ಬರೆದಾಗಲೂ ನಾನು ಅತೃಪ್ತಿಯಿಂದ ನರಳುತ್ತೇನೆ. ಅದು ಇನ್ನೂ ಏನೋ ಹೇಳಲಿಕ್ಕಿದೆ ಅನಿಸುತ್ತದೆ. ಈ ಪ್ರಶಸ್ತಿಗೆ ನಾನು ಎಷ್ಟರಮಟ್ಟಿಗೆ ಅರ್ಹಳೋ ತಿಳಿದಿಲ್ಲ. ಆದರೆ, ಇದು ಮುಂದಿನ ಬರವಣಿಗೆಯ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.