ಶಿರಸಿ:ಅಡಿಕೆ ವ್ಯಾಪಾರಿಗಳು ಎಂದೇಳಿಕೊಂಡು ಇಲ್ಲಿನ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ಆರೋಪಿಗಳನ್ನು ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಅಹ್ಮದ್ ನಗರ ಮೂಲದವರು ಎನ್ನಲಾದ ತೈಯ್ಯಬ್ ಬಿಬನ್ ಶೇಖ್ ಪಾನವಾಡಿ ಸೋನಿ, ಅನೀಲ್ ಮಾಧವ ವಾಘ ಹಾಗೂ ಬಾಬಾಸಾಹೇಬ್ ಪರಶುರಾಮ ಸಾಸೆ ಬಂಧಿತ ಆರೋಪಿಗಳು. ಇವರನ್ನು ಮಾರುಕಟ್ಟೆ ಠಾಣೆ ಪಿ.ಎಸ್.ಐ ನಾಗಪ್ಪ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿ ಇವರ ವಿರುದ್ಧ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.