ಭಟ್ಕಳ: ಭಟ್ಕಳದ ಪರಶುರಾಮ ಸ್ಪೋರ್ಟ್ಸ್ ಕ್ಲಬ್ನ ಕಬಡ್ಡಿ ಆಟಗಾರನಾಗಿ ಸಾಕಷ್ಟು ಹೆಸರು ಸಂಪಾದಿಸಿದ್ದ ಮನೋಜ ನಾಯ್ಕ ಹೃದಯಾಘಾತದಿಂದ ನಿಧನರಾದರು.
ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಮನೋಜ ನಾಯ್ಕ ಜಿಲ್ಲೆಯ ಅತ್ಯುತ್ತಮ ಕಬಡ್ಡಿ ತಂಡಗಳಲ್ಲೊಂದಾಗಿರುವ ಪರಶುರಾಮ ಭಟ್ಕಳದ ಕೀ ಪ್ಲೇಯರ್ ಆಗಿದ್ದ ಮನೋಜ ನಾಯ್ಕ ತಂಡ ಹತ್ತು ಹಲವಾರು ಟೂರ್ನಿಗಳಲ್ಲಿ ಟ್ರೋಫಿ ಗೆಲ್ಲಲು ನೆರವಾಗಿದ್ದರು.
ಕಬಡ್ಡಿ ಆಟಗಾರನ ಆಕಸ್ಮಿಕ ಅಗಲಿಕೆಗೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ ಸೇರಿದಂತೆ ಹಲವು ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಆಟದ ಜೊತೆ ಎದುರಾಳಿಯನ್ನು ಮಣಿಸುವ ತಂತ್ರಗಾರಿಕೆಯಲ್ಲಿಯೂ ಮನೋಜ ನಾಯ್ಕ ಮುಂಚೂಣಿಯಲ್ಲಿದ್ದರು. ತನ್ನ ಆಕ್ರಮಣಕಾರಿ ಆಟದ ಜೊತೆ ತಂಡವನ್ನೂ ಆಕ್ರಮಣಕಾರಿಯಾಗಿ ಮುನ್ನಡೆಸುತ್ತಿದ್ದ ನಾಯ್ಕ ಅಕಾಲಿಕ ಅಗಲಿಕೆ ಕಬಡ್ಡಿ ಆಟಗಾರರಲ್ಲಿ ಮರುಕ ಉಂಟುಮಾಡಿದೆ.