ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿದ್ದು, ಖಾತೆ ನಿಯಮಗಳನ್ನು ಉಲ್ಲಂಘನೆ ಮಾಡಿರುವುದಾಗಿ ಟ್ವಿಟ್ಟರ್ ಇದೀಗ ನೋಟಿಸ್ ನೀಡಿದೆ.
ಅನಂತಕುಮಾರ್ ಟ್ವಿಟರ್ ಖಾತೆ ಲಾಕ್ ನೋಟಿಸ್ನಲ್ಲಿ ನಿಮ್ಮ ಖಾತೆ ನಮ್ಮ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದು, ಖಾತೆಯನ್ನು ಅನ್ಲಾಕ್ ಮಾಡಲು ನಿಯಮ ಉಲ್ಲಂಘಿಸಿದ ಟ್ವೀಟ್ ಡಿಲೀಟ್ ಮಾಡುವಂತೆ ಸೂಚಿಸಿದೆ.
ಟ್ವಿಟರ್ ಭಾರತ ವಿರೋಧಿ ಎಂದ ಹೆಗಡೆ ಏಪ್ರಿಲ್ 8 ರಿಂದ ತಬ್ಲಿ ಘಿ ಜಮಾತ್ನ ವಿರುದ್ಧ ಅನಂತಕುಮಾರ ಹೆಗಡೆ ಅವರು ಬರಹಗಳ ಸರಣಿಯನ್ನು ಶುರು ಮಾಡಿದ್ದರು. ಸುಮಾರು ನಾಲ್ಕು ಸುಧೀರ್ಘ ಬರಹಗಳನ್ನು ಅವರು ಕೊರೊನಾ ವೈರಸ್ ಎಂಬ ಜಿಹಾದ್ನ್ನು ತಬ್ಲಿಘಿಗಳು ಹರಡುತ್ತಿದ್ದಾರೆ ಎಂಬ ಇತ್ಯಾದಿ ಅರ್ಥದಲ್ಲಿ ಪ್ರಕಟಿಸಿದ್ದರು. ಇದೇ ಟ್ವೀಟಿನ ನೆಪವಿಟ್ಟುಕೊಂಡು ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಿರುವುದಾಗಿ ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಸಂಸದ ಅನಂತಕುಮಾರ್ ಟ್ವಿಟರ್ ಖಾತೆ ಲಾಕ್ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಟ್ವಿಟರ್ ಭಾರತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಭಾರತದ ವಿರುದ್ಧ ಷಡ್ಯಂತರ ಹಾಗೂ ಭಾರತವನ್ನು ಒಡೆಯುವ ಟ್ವೀಟ್ಗಳನ್ನು ಪ್ರಚಾರ ಮಾಡುವ ಉದ್ಯಮವನ್ನು ಟ್ವಿಟರ್ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಗುರುಪಟವಂತ ಸಿಂಘ್ ಪನ್ನೂನ್ ಎಂಬ ಟ್ವಿಟ್ಟರ್ ಖಾತೆಯಿಂದ ಪಂಜಾಬ್ ರಾಜ್ಯವನ್ನು ಭಾರತದಿಂದ ಸ್ವಾತಂತ್ರ್ಯಗೊಳಿಸಿ, ಖಲಿಸ್ಥಾನ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿಸುವುದರ ಬಗ್ಗೆ ಟ್ವೀಟ್ ಮಾಡಿದ್ದು, ಅದನ್ನು ಟ್ವಿಟರ್ಗೆ ಹಣ ಪಾವತಿಸಿ ಜಾಹೀರಾತು ನೀಡಿದ್ದಾರೆ.
ಗುರುಪಟವಂತ ಸಿಂಘ್ ಪನ್ನೂನ್ ಎಂಬ ಟ್ವಿಟ್ಟರ್ ಖಾತೆಯಲ್ಲಿನ ಟ್ವೀಟ್.. ಇದು ಭಾರತದ ವಿರುದ್ಧ ನಡೆಸುತ್ತಿರುವ ಜಾಹೀರಾತಾಗಿದೆ. ಇಂತಹ ರಾಷ್ಟ್ರವಿರೋಧ ಚಟುವಟಿಕೆಯನ್ನು ಬಯಲು ಮಾಡಿ, ಪ್ರಧಾನಿ ಹಾಗೂ ಗೃಹ ಸಚಿವರ ಗಮನಕ್ಕೆ ನಾನು ತಂದಿದ್ದರ ಪರಿಣಾಮವಾಗಿ, ತಬ್ಲಿಘಿ ಜಮಾತ್ನ ವಿರುದ್ಧ ನಾನು ಮಾಡಿರುವ ಟ್ವೀಟಿನ ನೆಪವಿಟ್ಟುಕೊಂಡು ನನ್ನ ಟ್ವಿಟ್ಟರ್ ಅಕೌಂಟನ್ನು ರದ್ದು ಮಾಡಿದ್ದಾರೆ. ಟ್ವಿಟರ್ ಭಾರತ ವಿರೋಧಿಯಾಗಿದೆ ಎಂದು ಅನಂತಕುಮಾರ್ ಹೆಗಡೆ ಕಿಡಿಕಾರಿದ್ದಾರೆ.
ಇನ್ನು ನಾನು ಮಾಡಿರುವ ಟ್ವೀಟ್ ತೆಗೆದು ಹಾಕಿದರೆ ಅನ್ ಲಾಕ್ ಮಾಡುವುದಾಗಿ ಟ್ವಿಟರ್ ಹೇಳಿದೆ. ಆದರೆ ದೇಶದ ವಿರುದ್ಧ ನಡೆಯುವ ಯಾವುದೇ ನಡೆಯನ್ನು ನಾನು ನೇರವಾಗಿ ವಿರೋಧಿಸುತ್ತೇನೆ. ಮಾಡಿರುವ ಟ್ವೀಟ್ ಅಳಿಸುವ ಪ್ರಶ್ನೆಯೇ ಇಲ್ಲ. ಅದರಲ್ಲಿ ಟ್ವಿಟ್ಟರ್ ನಡೆಸುತ್ತಿರುವ ಭಾರತ ವಿರೋಧಿ ಪ್ರಚಾರಗಳನ್ನು ನಾನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ದೇಶ ವಿರೋಧಿ ಸಾಮಾಜಿಕ ಜಾಲತಾಣದ ಅಕೌಂಟಿಗಿಂತ ನನ್ನ ದೇಶ, ನನ್ನ ಸಿದ್ಧಾಂತ ನನ್ನ ಜೀವನದ ಆದ್ಯತೆ ಎಂದು ಅವರು ಹೇಳಿದ್ದಾರೆ.