ಶಿರಸಿ :ಇಲ್ಲಿನ ಸಹ್ಯಾದ್ರಿ ತಗ್ಗಿನ ಬಳಿ ಪತ್ತೆಯಾದ ಗಾಂಜಾ ಹಾಗೂ ದರೋಡೆ ಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿರಸಿಯಲ್ಲಿ ಮತ್ತೆ ಮೂವರು ಗಾಂಜಾ ವ್ಯಸನಿಗಳ ಬಂಧನ - Police arrested three accused
ಸಹ್ಯಾದ್ರಿ ತಗ್ಗಿನ ಬಳಿ ಪತ್ತೆಯಾದ ಗಾಂಜಾ ಮಾರಾಟ ಮತ್ತು ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಗಾಂಜಾ ಮಾರಾಟ ಮತ್ತು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು, ಕೆ.ಎಚ್.ಬಿ ಕಾಲೋನಿಯ ಪೃಥ್ವಿ, ಮರಾಠಿಕೊಪ್ಪದ ಗಣೇಶ ಹಾಗೂ ಮಣಿಕಂಠ ಕೋಡಿಯಾ ಎಂಬುವವರನ್ನು ಬಂಧಿಸಿದ್ದಾರೆ.
ನಗರ ತ್ಯಜಿಸಿದ ವ್ಯಸನಿಗಳು:
ಅಕ್ರಮ ಗಾಂಜಾ ಮಾರಾಟ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿತರ ಸಂಪರ್ಕದಲ್ಲಿರುವ ಗಾಂಜಾ ಮಾದಕ ವ್ಯಸನಿಗಳು ನಗರದಿಂದ ಕಾಲ್ಕಿತ್ತಿದ್ದಾರೆ. ಗಾಂಜಾ ವ್ಯಸನಿಗಳ ಜಾಡು ಹಿಡಿದಿದ್ದು, ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.