ಕಾರವಾರ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸ್ಮರಣಾರ್ಥಕವಾಗಿ ಛತ್ರಪತಿ ಶಿವಾಜಿ ವೃತದಲ್ಲಿ ಅಳವಡಿಸಿರುವ ಅಮೃತ ಮಹೋತ್ಸವದ ಲೋಗೊ ಬಾರಿ ವಿವಾದ ಸೃಷ್ಟಿಸಿದೆ. ಈ ಸಂಬಂಧ ಪುರಸಭಾ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಾಗಿದೆ.
ಲೋಗೊದಲ್ಲಿ ಅಳವಡಿಸಿರುವ ಐತಿಹಾಸಿಕ ಸ್ಮಾರಕಗಳ ಬಗ್ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಲೋಗೊದಲ್ಲಿ ಒಂದೇ ಸಮುದಾಯಕ್ಕೆ ಸೇರಿದ ಪ್ರತಿಕೃತಿಗಳನ್ನು ಅಳವಡಿಸಲಾಗಿದೆ ಎಂದು ದೂರಿದೆ. ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಲಿ, ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಯಾವುದೇ ಪ್ರತಿಕೃತಿಗಳು ಇಲ್ಲ ಎಂದು ಆರೋಪಿಸಿದೆ.
ಹಳಿಯಾಳದಲ್ಲಿ ಸ್ವಾತಂತ್ರ್ಯೋತ್ಸವ ಲೋಗೊ ವಿವಾದ... ಪುರಸಭೆ ಅಧ್ಯಕ್ಷನ ವಿರುದ್ಧ ಪ್ರಕರಣ ಇನ್ನು ಈ ವಿವಾದ ತಿರಸ್ಕರಿಸುತ್ತಿರುವ ಕಾಂಗ್ರೆಸ್ , ಅಮೃತ ಮಹೋತ್ಸವದ ಆಚರಣೆಗಾಗಿ ಆಡಳಿತ ಮತ್ತು ಪ್ರತಿಪಕ್ಷ ಹಾಗೂ ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಹಾಗೂ ಪುರಸಭಾ ಸಿಬ್ಬಂದಿಗಳನ್ನೊಳಗೊಂಡ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ಗಮನಕ್ಕೆ ತಂದೇ ಲೋಗೊ ಸಿದ್ಧಪಡಿಸಲಾಗಿದೆ ಎಂದು ಹೇಳಿದೆ.
ಪ್ರತಿಪಕ್ಷದವರು ಬಯಸಿರುವ ಪ್ರತಿಕೃತಿಗಳನ್ನೊಳಗೊಂಡ ಮತ್ತೊಂದು ಲೋಗೋವನ್ನು ಸಿದ್ಧಪಡಿಸಿ ಪಟ್ಟಣದಲ್ಲಿಯೇ ಅಳವಡಿಸೋಣ ಎಂದು ಸಲಹೆ ನೀಡಿದ್ದು, ಆದರೆ ಈ ಸಲಹೆಗೆ ಬಿಜೆಪಿ ಒಪ್ಪಿಗೆ ಸೂಚಿಸಿಲ್ಲ. ವಿವಾದ ಬಗೆಹರಿಸಲು ಪುರಸಭೆಯಲ್ಲಿ ತುರ್ತುಸಭೆ ಕರೆಯಲಾಗಿತ್ತಾದರೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿಲ್ಲ.
ಬಿಜೆಪಿ ಸದಸ್ಯರು ಆಡಳಿತ ಸೌಧಕ್ಕೆ ತೆರಳಿ ತಹಶೀಲ್ದಾರ್ ಪ್ರಕಾಶ ಗಾಯಕವಾಡರಿಗೆ, ಜೊತೆಗೆ ಮಾಜಿ ಶಾಸಕ ಸುನೀಲ ಹೆಗಡೆ ಲೋಗೊ ವಿವಾದ ಬಗೆಹರಿಸಲು ಮನವಿ ಮಾಡಿದ್ದಾರೆ. ರಾತ್ರಿ ಲೋಗೊ ತೆರವುಗೊಳಿಸಲು ಮುಂದಾದ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆ ಮಾಡಿದ್ದಾರೆ. ಸದ್ಯ ಪ್ರಕರಣ ಬೂದಿ ಮುಚ್ಚಿದ ಕೆಂಡದಂತಿದ್ದು ಲೋಗೊ ಇಟ್ಟ ಜಾಗದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ
ಇದನ್ನೂ ಓದಿ :ನಮ್ಮ ಸ್ವಾತಂತ್ರ್ಯ ನಡಿಗೆಗೆ ಜನರಿಂದ ಇಷ್ಟು ದೊಡ್ಡ ಪ್ರತಿಕ್ರಿಯೆ ನಿರೀಕ್ಷೆ ಮಾಡಿರಲಿಲ್ಲ.. ಡಿಕೆಶಿ