ಕಾರವಾರ: ಧಾರಾಕಾರ ಸುರಿದ ಮಳೆಯಿಂದಾಗಿ ಸುಮಾರು ಆರು ಎಕರೆಗೂ ಹೆಚ್ಚು ಮಣ್ಣಿನ ಗುಡ್ಡ ಕುಸಿತ ಉಂಟಾಗಿದೆ.
ಮಣ್ಣಿನ ಗುಡ್ಡ ಕುಸಿತದಿಂದ 20 ಎಕರೆ ಕೃಷಿ ಭೂಮಿ ಹಾನಿಯಾಗಿರುವ ಘಟನೆ ತಾಲೂಕಿನ ದೇವಳಮೆಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಗೆ ಗ್ರಾಮದ ಬಳಿ ನಡೆದಿದೆ.

ಕಳೆದ ನಾಲ್ಕು ದಿನಗಳಿಂದ ಸತತ ಮಳೆಯಾಗುತ್ತಿದೆ. ಇದೇ ಮೊದಲ ಸಲ ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಗುಡ್ಡ ಕುಸಿತದಿಂದ ಯಾವುದೇ ಮನೆಗಳಿಗೆ ಹಾನಿಯಾಗಿಲ್ಲ. ಆದರೆ, 20 ಎಕರೆ ಕೃಷಿ ಭೂಮಿಗೆ ಧಕ್ಕೆಯಾಗಿದೆ.
ಭತ್ತದ ಗದ್ದೆಗಳಿಗೆ ಮಣ್ಣು ಬಂದು ತುಂಬಿಕೊಂಡಿದ್ದು, ಬೆಳೆ ನಾಶವಾಗಿದೆ. ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಇಲ್ಲಿನ ಜನ ಕೂಡ ಇದರಿಂದ ಆತಂಕಗೊಂಡಿದ್ದಾರೆ. ಆರು ಎಕರೆ ಪ್ರದೇಶದಲ್ಲಿ ಮರಗಿಡಗಳು ಸಹಿತ ಭೂ ಕುಸಿತ ಉಂಟಾಗಿದೆ.