ಕರ್ನಾಟಕ

karnataka

ETV Bharat / state

ಮುಳುಗುತ್ತಿದ್ದ ಬೋಟ್​​ನಿಂದ 30 ಮೀನುಗಾರರ ರಕ್ಷಣೆ: ಹಿಡಿದ ಮೀನು ಸಮುದ್ರಕ್ಕೆ! - ಜಲ ಪದ್ಮಾವತಿ ಬೋಟ್

30 ಜನ ಮೀನುಗಾರರನ್ನು ಒಳಗೊಂಡ ಬೋಟ್ ಮುಳುಗಿದ್ದು, ಮೀನುಗಾರರು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

fishermen rescued after their boats capsize
ಹಿಡಿದ ಮೀನುಗಳನ್ನು ಸಮುದ್ರಕ್ಕೆ ಚೆಲ್ಲುತ್ತಿರುವ ಮೀನುಗಾರರು

By

Published : Sep 20, 2022, 6:44 AM IST

ಕಾರವಾರ:ಮೀನುಗಾರಿಕೆಗೆ ತೆರಳಿದ್ದ ಬೋಟ್​ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದು, 30 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿ ಬೈತಖೋಲ ಬಂದರಿಗೆ ಕರೆತರಲಾಗಿದೆ.

ಹಿಡಿದ ಮೀನುಗಳನ್ನು ಸಮುದ್ರಕ್ಕೆ ಚೆಲ್ಲುತ್ತಿರುವ ಮೀನುಗಾರರು

ವಾಮನ ಹರಿಕಂತ್ರ ಎಂಬುವವರಿಗೆ ಸೇರಿದ ಜಲ ಪದ್ಮಾವತಿ ಬೋಟ್ ಮೀನುಗಾರಿಕೆ ನಡೆಸಿ ವಾಪಸ್​​ ಆಗುತ್ತಿದ್ದಾಗ ರಂಧ್ರ ಉಂಟಾಗಿ ನೀರು ತುಂಬಿದೆ. ಬೋಟ್ ಮುಳುಗುತ್ತಿರುವ ಕಾರಣ ಹಿಡಿದ ಮೀನುಗಳನ್ನು ಮೀನುಗಾರರು ಸಮುದ್ರಕ್ಕೆ ಚೆಲ್ಲಿದ್ದಾರೆ. ಅಂದಾಜು 30 ಟನ್ ಮೀನುಗಳನ್ನು ಹಿಡಿದು ವಾಪಸ್​​ ಆಗುತ್ತಿದ್ದರು ಎಂದು ತಿಳಿದುಬಂದಿದೆ. ಇತರ ಬೋಟ್​ಗಳ ಸಹಾಯದಿಂದ ಬಂದರಿಗೆ ಬೋಟ್ ಎಳೆದು ತಂದಿದ್ದಾರೆ. ಘಟನೆಯಿಂದ ಅಂದಾಜು ₹ 50 ಲಕ್ಷ ಹಾನಿಯಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಭಾರತೀಯ ಕೋಸ್ಟ್ ಗಾರ್ಡ್ ಕ್ಷಿಪ್ರ ಕಾರ್ಯಾಚರಣೆ: ಮುಳುಗುತ್ತಿದ್ದ ಹಡಗಿನಿಂದ 19 ಜನರ ರಕ್ಷಣೆ

ABOUT THE AUTHOR

...view details