ಕಾರವಾರ :ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿದ ಮಳೆಗೆ ನದಿಗಳ ನೀರು ಕೆಂಪಾಗಿ ಹರಿಯುತ್ತಿದೆ. ಪರಿಣಾಮ ಕಾರವಾರದಲ್ಲಿ ಕಡಲಿಗೆ ಕಡಲೇ ಕೆಂಪು ಬಣ್ಣಕ್ಕೆ ತಿರುಗಿದೆ.
ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಾಳಿ, ಗಂಗಾವಳಿ, ಅಘನಾಶಿನಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮಾತ್ರವಲ್ಲದೆ ನದಿಗಳ ನೀರು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿ ಸಮುದ್ರಗಳನ್ನು ಸೇರುತ್ತಿದೆ.
ಸ್ವಲ್ಪ ದಿನ ಬಿಡುವಿನ ಬಳಿಕ ಮತ್ತೆ ಮಳೆ ಅಬ್ಬರಿಸಿದ ಪರಿಣಾಮ ನದಿಗಳ ಮೂಲಕ ಮಣ್ಣು ಮಿಶ್ರಿತ ನೀರು ಕಡಲು ಸೇರುತ್ತಿದೆ. ಮಾತ್ರವಲ್ಲ ಕಡಲಿನಲ್ಲಿ ಅಲೆಗಳ ಅಬ್ಬರ ಕೂಡ ಜೋರಾಗಿದ್ದು, ಕಡಲಿಗೆ ಕಡಲೇ ಕೆಂಪು ಬಣ್ಣದಲ್ಲಿ ಗೋಚರವಾಗುತ್ತಿದೆ.
ಬೆಳಗ್ಗೆ ಜೋರಾಗಿದ್ದ ಮಳೆ ಆರ್ಭಟ ಸಂಜೆ ಹೊತ್ತಿಗೆ ಕಡಿಮೆಯಾಗಿದೆ. ಆದರೆ, ಕಡಲಿನಲ್ಲಿ ಅಲೆಗಳ ಅಬ್ಬರ ಜೋರಾಗಿರುವ ಕಾರಣ ಬೋಟ್‌ಗಳು ಲಂಗರು ಹಾಕಿಕೊಂಡಿವೆ. ಕಡಲು ತಣ್ಣಗಾದ ಬಳಿಕವೇ ಮೀನುಗಾರಿಕೆಗೆ ತೆರಳಲಿವೆ ಎಂದು ಮೀನುಗಾರರು ತಿಳಿಸಿದ್ದಾರೆ.