ಕರ್ನಾಟಕ

karnataka

ETV Bharat / state

ಕೌಟುಂಬಿಕ ಕಲಹ.. ಸಿದ್ದಾಪುರದಲ್ಲಿ ಹೆಂಡತಿಯನ್ನೇ ಕೊಲೆ ಮಾಡಿ ಗಂಡ ಪರಾರಿ! - ಸಿದ್ದಾಪುರದಲ್ಲಿ ಹೆಂಡ್ತಿಯನ್ನು ಕೊಂದ ಪತಿ

ಕೌಟುಂಬಿಕ ಕಲಹ ಹಿನ್ನೆಲೆ ಗಂಡನೊಬ್ಬ ತನ್ನ ಹೆಂಡ್ತಿಯನ್ನು ಕೊಂದು ಪರಾರಿಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ.

Husband killed his wife in UttaraKannada, Husband killed his wife in Sirsi, Karawar crime news, ಉತ್ತರಕನ್ನಡದಲ್ಲಿ ಹೆಂಡ್ತಿಯನ್ನು ಕೊಂದ ಪತಿ, ಶಿರಸಿಯಲ್ಲಿ ಹೆಂಡ್ತಿಯನ್ನು ಕೊಂದ ಪತಿ, ಕಾರವಾರ ಅಪರಾಧ ಸುದ್ದಿ,
ಸಿದ್ದಾಪುರದಲ್ಲಿ ಹೆಂಡತಿಯನ್ನೇ ಕೊಲೆ ಮಾಡಿದ ಗಂಡ

By

Published : May 21, 2022, 7:53 AM IST

ಸಿದ್ದಾಪುರ(ಉತ್ತರ ಕನ್ನಡ) :ಕೌಟುಂಬಿಕ ಕಲಹದ ಹಿನ್ನೆಲೆ ಹೆಂಡತಿಯನ್ನು ಗಂಡ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಹೆಗ್ಗೋಡ್ಮನೆಯಲ್ಲಿ ಶುಕ್ರವಾರ ನಡೆದಿದೆ. ಇಲ್ಲಿಯ ನಿವಾಸಿ ಮಂಜುಳಾ ಚನ್ನಯ್ಯ (46) ಕೊಲೆಯಾದ ಗೃಹಿಣಿ ಎಂದು ಗುರುತಿಸಲಾಗಿದೆ.

ಸಿದ್ದಾಪುರದಲ್ಲಿ ಹೆಂಡತಿಯನ್ನೇ ಕೊಲೆ ಮಾಡಿದ ಗಂಡ

ಮೃತಳ ಗಂಡ ಮಂಜುನಾಥ ಚನ್ನಯ್ಯ ಮತ್ತು ಮಂಜುಳಾ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗ್ತಿದೆ. ಇದರಿಂದ ಕೋಪಗೊಂಡ ಮಂಜುನಾಥ ತನ್ನ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಹೆದರಿ ಪರಾರಿಯಾಗಿದ್ದಾನೆ.

ಓದಿ:ಬೀದರ್​ನಲ್ಲಿ ಯುವಕನ ಬರ್ಬರ ಕೊಲೆ: ಚಾಕುವಿನಿಂದ ಇರಿದು ಕೊಂದ ವ್ಯಕ್ತಿ

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ಮಂಜುನಾಥನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details