ಕಾರವಾರ: ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾದ ಘಟನೆ ಕುಮಟಾ ತಾಲೂಕಿನ ದೇವಿಮನೆಘಟ್ಟದಲ್ಲಿ ನಡೆದಿದೆ.
ಚಲಿಸುತ್ತಿದ್ದ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಹೊಗೆ... ಬೆಚ್ಚಿಬಿದ್ದ ಪ್ರಯಾಣಿಕರು! - ಬಸ್‌ನಲ್ಲಿ ಹೊಗೆ ಕಾಣಿಸುಕೊಂಡು ಪ್ರಯಾಣಿಕರು ಗಾಬರಿ
ಶಿರಸಿಯಿಂದ ಕಾರವಾರಕ್ಕೆ ಹೋಗುತ್ತಿದ್ದ ಬಸ್ವೊಂದರಲ್ಲಿ ಹೊಗೆ ಕಾಣಿಸಿಕೊಂಡು ಪ್ರಯಾಣಿಕರು ಗಾಬರಿಗೊಂಡಿದ್ದ ಘಟನೆ ನಡೆದಿದೆ.
ಬಸ್‌ನಲ್ಲಿ ದಿಢೀರ್ ಹೊಗೆ
ಶಿರಸಿಯಿಂದ ಕಾರವಾರಕ್ಕೆ ಹೋಗುತ್ತಿದ್ದ ಬಸ್ ಘಟ್ಟದಲ್ಲಿ ಇಳಿಯುತ್ತಿದ್ದ ವೇಳೆ ಬ್ರೇಕ್ ಲೈನರ್ ಬಿಸಿಯಾದ ಪರಿಣಾಮ ಚಾಲಕನ ಬದಿಯ ಮುಂದಿನ ಚಕ್ರದ ಬಳಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಚಾಲಕ ಬಸ್ ನಿಲ್ಲಿಸಿದ್ದು, ಹೊಗೆ ಕಂಡೊಡನೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಯಾಣಿಕರು ಗಾಬರಿಗೊಂಡು ಬಸ್ನಿಂದ ಇಳಿದಿದ್ದಾರೆ.
ಬಳಿಕ ಚಾಲಕ ಲೈನರ್ ಬಿಸಿಯಾದ ವಿಚಾರವನ್ನು ತಿಳಿಸಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಕೆಲ ಹೊತ್ತು ಬಸ್ಅನ್ನು ಘಟ್ಟದಲ್ಲಿಯೇ ನಿಲ್ಲಿಸಿ ಬಳಿಕ ಅದೇ ಬಸ್‌ನಲ್ಲಿ ಪ್ರಯಾಣಿಕರನ್ನು ಕಾರವಾರಕ್ಕೆ ಕರೆದೊಯ್ಯಲಾಗಿದೆ.