ಕಾರವಾರ: ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವಂತೆ ಇಲ್ಲೊರ್ವ ತನ್ನ ಉದ್ಯಮಕೋಸ್ಕರ ಹರಿವ ನೀರನ್ನೆ ಹಿಡಿದು ನಿಲ್ಲಿಸಿದ್ದಾನೆ. ಪರಿಣಾಮ ನೂರಾರು ಎಕರೆ ಭೂಮಿಯಲ್ಲಿ ನೀರು ತುಂಬಿ ನಾಟಿಗೆ ಬಂದಿದ್ದ ಭತ್ತದ ಪೈರು ಕೊಳೆತು ನಾಶವಾಗುವಂತಾಗಿದೆ.
ಯಾರದ್ದೊ ತಪ್ಪು, ಇನ್ಯಾರಿಗೋ ಶಿಕ್ಷೆ, ನೀರು ತುಂಬಿ ನಾಟಿ ಮಾಡಬೇಕಿದ್ದ ಪೈರು ನಾಶ! - ನೀರು
ಕಾರವಾರದಲ್ಲಿ ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವಂತೆ ಇಲ್ಲೋ ರ್ವ ತನ್ನ ಉದ್ಯಮಕೋಸ್ಕರ ಹರಿವ ನೀರನ್ನೆ ಹಿಡಿದು ನಿಲ್ಲಿಸಿದ್ದಾನೆ. ಪರಿಣಾಮ ನೂರಾರು ಎಕರೆ ಭೂಮಿಯಲ್ಲಿ ನೀರು ತುಂಬಿ ನಾಟಿಗೆ ಬಂದಿದ್ದ ಭತ್ತದ ಸಸಿ ಕೊಳೆತು ನಾಶವಾಗುವಂತಾಗಿದೆ.
ಹೌದು, ಕಾರವಾರ ತಾಲೂಕಿನ ಚಿತ್ತಾಕುಲ ಪಂಚಾಯತಿ ವ್ಯಾಪ್ತಿಯ ಕಣಸಗಿರಿಯಲ್ಲಿ ಈ ಘಟನೆ ನಡೆದಿದ್ದು,ರೈತರು ಕಂಗಾಲಾಗಿದ್ದಾರೆ. ಕೆಲ ದಿನಗಳಲ್ಲಿಯೇ ನಾಟಿ ಮಾಡಬೇಕಿದ್ದ ಭತ್ತದ ಪೈರು ನೀರಿನಲ್ಲಿ ಮುಳುಗಿ ಸಂಪೂರ್ಣ ನಾಶವಾಗಿದ್ದು, ರೈತರು ತಲೆ ಮೇಲೆ ಕೈ ಇಟ್ಟುಕೊಂಡು ಕೂರುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಕಣಸಗಿರಿಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಮಳೆಗಾಲ ಆರಂಭವಾಗುತ್ತಿದ್ದಂತೆ ನೀರು ತುಂಬುತ್ತಿದ್ದು, ಬೆಳೆದ ಬೆಳೆ ಮಣ್ಣುಪಾಲಾಗುತ್ತಿದೆ. ಇದೆ ಪ್ರದೇಶದಲ್ಲಿ ಮೀನು ಸಾಕಾಣಿಕೆ ನಡೆಸುತ್ತಿರುವ ಸುಧಾಕರ್ ದುರ್ಗೇಕರ್ ಎಂಬುವವರು ಮಳೆನೀರು ನದಿಗೆ ಹರಿದು ಹೋಗಲು ಬಿಡದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.
ಈತ ಮೀನುಸಾಕಾಣಿಕೆಗಾಗಿ ನೀರನ್ನು ಶೇಖರಣೆ ಮಾಡುತ್ತಿದ್ದು,ಆ ನೀರು ಸುತ್ತಮುತ್ತಲಿನ ಭಾಗದ ಕೃಷಿ ಭೂಮಿಗಳಿಗೆ ನುಗುತ್ತಿದೆ. ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ, ಜಿಲ್ಲಾಧಿಕಾರಿ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕಾರಣಕ್ಕೆ ಸುತ್ತುಮುತ್ತಲಿನ ಭಾಗದ ರೈತರು ಭೂಮಿಯನ್ನು ಪಾಳು ಬಿಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ನಮ್ಮ ಸಮಸ್ಯೆಯನ್ನು ಸರಿಪಡಿಸಬೇಕು ಅಂತಾರೆ ರೈತರು.