ಕರ್ನಾಟಕ

karnataka

ETV Bharat / state

ದಾಂಡೇಲಿಯಲ್ಲಿ ಮೊಸಳೆ ಎಳೆದೊಯ್ದಿದ್ದ ವ್ಯಕ್ತಿ ಶವವಾಗಿ ಪತ್ತೆ - crocodile

ನಿನ್ನೆ ದಾಂಡೇಲಿಯಲ್ಲಿ ಮೊಸಳೆ ಎಳೆದೊಯ್ದಿದ್ದ ವ್ಯಕ್ತಿ ಶವ ಪತ್ತೆ ಆಗಿದೆ.

dead body of man which dragged by crocodile found today in dandeli
ದಾಂಡೇಲಿಯಲ್ಲಿ ಮೊಸಳೆ ಎಳೆದೊಯ್ದಿದ್ದ ವ್ಯಕ್ತಿ ಶವ ಪತ್ತೆ

By

Published : Aug 14, 2022, 7:38 PM IST

ದಾಂಡೇಲಿ (ಉತ್ತರಕನ್ನಡ): ಮೀನು ಹಿಡಿಯುತ್ತಿರುವಾಗ ಮೊಸಳೆ ಎಳೆದೊಯ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ದಾಂಡೇಲಿ ಬಳಿ ಕಾಳಿ ನದಿ‌ಯಲ್ಲಿ ಇಂದು ಪತ್ತೆಯಾಗಿದೆ.

ದಾಂಡೇಲಿಯ ವಿನಾಯಕ ನಗರದ ಅಲೈಡ್ ಬಳಿ ಶನಿವಾರದಂದು ಮೀನು ಹಿಡಿಯುತ್ತಿದ್ದ ಸುರೇಶ್ ವಸಂತ್ ತೇಲಿ(44) ಎನ್ನುವ ವ್ಯಕ್ತಿಯನ್ನು ಮೊಸಳೆ ಎಳೆದೊಯ್ದಿತ್ತು. ನಾಪತ್ತೆಯಾದ ಸುರೇಶರಿಗಾಗಿ ರೆಸ್ಕ್ಯೂ ತಂಡ ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದರಾದರೂ ನಿನ್ನೆ ಪತ್ತೆಯಾಗಿರಲಿಲ್ಲ.

ದಾಂಡೇಲಿಯಲ್ಲಿ ಮೊಸಳೆ ಎಳೆದೊಯ್ದಿದ್ದ ವ್ಯಕ್ತಿ ಶವ ಪತ್ತೆ

ಇಂದು ಮತ್ತೆ ಶೋಧ ಕಾರ್ಯ ನಡೆಸಿದಾಗ ಕಾಳಿ ನದಿಯಲ್ಲಿ ವ್ಯಕ್ತಿಯ ಮೃತದೇಹವನ್ನು ರಕ್ಷಣಾ ತಂಡ ಪತ್ತೆ ಮಾಡಿದೆ. ಈ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ದಾಂಡೇಲಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಎಳೆದೊಯ್ದ ಮೊಸಳೆ

ABOUT THE AUTHOR

...view details