ಕರ್ನಾಟಕ

karnataka

ETV Bharat / state

ವೆಂಕಟಾಪುರ ನದಿ ನಡುವಿನ ಮರಳು ದಿಬ್ಬದಲ್ಲಿ ಕಾಣಿಸಿದ ಮೊಸಳೆ.. ಭಟ್ಕಳ ಜನರಲ್ಲಿ ಆತಂಕ..

ಅರಣ್ಯ ಇಲಾಖೆಯ ವತಿಯಿಂದ ಈಗಾಗಲೇ ಸ್ಥಳೀಯರಿಗೆ ಮತ್ತು ಗ್ರಾಮ ಪಂಚಾಯತ್​​ಗೆ ಜಾಗೃತಿ ಮೂಡಿಸುವ ಕುರಿತು ಪತ್ರವನ್ನು ಸಹ ಬರೆಯಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೊಸಳೆಯನ್ನು ಹಿಡಿಯುವ ಕಾರ್ಯಾಚರಣೆಗೆ ಮುಂದಾಗಬೇಕಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ತಿಳಿಸಿದ್ದಾರೆ..

Crocodile found on venkatapura river
ವೆಂಕಟಾಪುರ ನದಿ ನಡುವಿನ ದಿಬ್ಬದಲ್ಲಿ ಕಾಣಿಸಿಕೊಂಡ ಮೊಸಳೆ

By

Published : Oct 3, 2021, 3:04 PM IST

ಭಟ್ಕಳ : ತಾಲೂಕಿನ ವೆಂಕಟಾಪುರ ನದಿಯ ನಡುವೆ ಇರುವ ಮರಳು ದಿಬ್ಬದಲ್ಲಿ ಕಳೆದ ಎರಡು ದಿನಗಳಿಂದ ಮೊಸಳೆಯೊಂದು ಕಾಣಿಸಿಕೊಂಡಿದ್ದು ಊರಿನವರಲ್ಲಿ ಆತಂಕ ಸೃಷ್ಟಿಸಿದೆ.

ವೆಂಕಟಾಪುರ ನದಿಯಲ್ಲಿ ಇದು ಪ್ರಥಮ ಬಾರಿಗೆ ಕಾಣಿಸಿಕೊಂಡಿದೆ. ಮಳೆಗಾಲದಲ್ಲಿ ಮೇಲಿಂದ ರಭಸದಲ್ಲಿ ಬರುವ ನೀರಿನಲ್ಲಿ ಕಡವಿನಕಟ್ಟೆ ಡ್ಯಾಂನಿಂದ ಕೆಳಕ್ಕೆ ಬಂದಿದೆಯೋ, ಇಲ್ಲಿಯೇ ಹಲವಾರು ವರ್ಷಗಳಿಂದ ಇದೆಯೋ ಎನ್ನುವ ಜಿಜ್ಞಾಸೆಗೆ ಕಾರಣವಾಗಿದೆ.

ಮರಳು ದಿಬ್ಬದ ಮೇಲೆ ಮಲಗಿದ್ದ ಮೊಸಳೆಯನ್ನು ಕಂಡಿದ್ದ ಸ್ಥಳೀಯರು ಫೋಟೋ ಕ್ಲಿಕ್ಕಿಸಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆಗೆ ಮೊಸಳೆ ಅದೇ ಮರಳು ದಿಬ್ಬದ ಮೇಲೆ ಕಾಣಿಸಿದೆ. ಇದು ಸುಮಾರು 5-6 ಅಡಿ ಉದ್ದವಿದ್ದ ಮೊಸಳೆಯಾಗಿದೆ. ಇದೇ ಪ್ರದೇಶದಲ್ಲಿ ಸದಾ ಜನರು ನೀರಿಗಿಳಿಯುವುದು, ಈಜುವುದು, ಓಡಾಡುವುದರಿಂದ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಮೊಸಳೆ ಕಾಣಿಸಿದ್ದನ್ನು ಸಾರ್ವಜನಿಕರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಅರಣ್ಯ ಇಲಾಖೆ ಮೊಸಳೆಯನ್ನು ಹಿಡಿದು ಬೇರೆಡೆಗೆ ಸಾಗಿಸುವುದಕ್ಕೆ ಕ್ರಮಕೈಗೊಳ್ಳಬೇಕು ಎನ್ನುವ ಕೂಗು ಕೇಳಿ ಬಂದಿದೆ.

ಇಲ್ಲಿ ಒಂದೇ ಮೊಸಳೆಯಿದೆಯೇ ಅಥವಾ ಇನ್ನು ಹೆಚ್ಚು ಮೊಸಳೆಗಳು ಬೀಡು ಬಿಟ್ಟಿದ್ದಾವೆಯೇ ಎನ್ನುವ ಕುರಿತು ಪರಿಶೀಲಿಸಬೇಕಿದೆ. ವೆಂಕಟಾಪುರ ನದಿಯಲ್ಲಿ ಇಳಿಯುವುದನ್ನು ತಡೆಯಬೇಕಾಗಿದೆ.

ಇದನ್ನೂ ಓದಿ:ಕಿಮ್ಸ್ ಮತ್ತೊಂದು ಸಾಧನೆ.. ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ..

ಅರಣ್ಯ ಇಲಾಖೆಯ ವತಿಯಿಂದ ಈಗಾಗಲೇ ಸ್ಥಳೀಯರಿಗೆ ಮತ್ತು ಗ್ರಾಮ ಪಂಚಾಯತ್​​ಗೆ ಜಾಗೃತಿ ಮೂಡಿಸುವ ಕುರಿತು ಪತ್ರವನ್ನು ಸಹ ಬರೆಯಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೊಸಳೆಯನ್ನು ಹಿಡಿಯುವ ಕಾರ್ಯಾಚರಣೆಗೆ ಮುಂದಾಗಬೇಕಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ತಿಳಿಸಿದ್ದಾರೆ.

ABOUT THE AUTHOR

...view details