ಕರ್ನಾಟಕ

karnataka

ETV Bharat / state

ಮುರ್ಡೇಶ್ವರದ ಸಲೂನ್​ನಲ್ಲಿ ಪಿಪಿಇ ಕಿಟ್ ಧರಿಸಿ ಕ್ಷೌರ ! - coronavirus safety measures

ಸಲೂನ್​ಗಳಲ್ಲಿ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗದ ಕಾರಣ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇದಕ್ಕಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಹೀಗಾಗಿ ಈ ಸಲೂನ್​ನಲ್ಲಿ ಪಿಪಿಇ ಕಿಟ್ ಧರಿಸಿ ಕ್ಷೌರ ಮಾಡಲಾಗುತ್ತಿದೆ.

ಮುರುಡೇಶ್ವರದ ಸಲೂನ್​ನಲ್ಲಿ ಪಿಪಿಇ ಕಿಟ್ ಧರಿಸಿ ಕ್ಷೌರ
ಮುರುಡೇಶ್ವರದ ಸಲೂನ್​ನಲ್ಲಿ ಪಿಪಿಇ ಕಿಟ್ ಧರಿಸಿ ಕ್ಷೌರ

By

Published : Jul 27, 2020, 10:12 PM IST

ಭಟ್ಕಳ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ಸಲೂನ್​ಗಳನ್ನು ಮುಚ್ಚಲಾಗಿತ್ತು. ಲಾಕ್‌ಡೌನ್ ನಿಯಮಗಳ ಸಡಿಲಿಕೆಯ ನಂತರ ಸಲೂನ್ ತೆರೆಯಲು ಸರ್ಕಾರ ಅನುಮತಿ ನೀಡಿತು. ಆದರೆ ಕೋವಿಡ್​ ಭಯದಿಂದಾಗಿ ಕ್ಷೌರದಂಗಡಿಗಳಿಗೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮುರ್ಡೇಶ್ವರದ ಕಲ್ಕತ್ತಾ ಹೇರ್​ ಸಲೂನ್​ನಲ್ಲಿ ಪಿಪಿಇ ಕಿಟ್ ಬಳಸಿ ಕ್ಷೌರ ಮಾಡಲಾಗುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮುರುಡೇಶ್ವರದ ಸಲೂನ್​ನಲ್ಲಿ ಪಿಪಿಇ ಕಿಟ್ ಧರಿಸಿ ಕ್ಷೌರ

ಸಲೂನ್​ಗಳಲ್ಲಿ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗದ ಕಾರಣ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇದಕ್ಕಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಹೀಗಾಗಿ ಈ ಸಲೂನ್​ನಲ್ಲಿ ಪಿಪಿಇ ಕಿಟ್ ಧರಿಸಿ ಕ್ಷೌರ ಮಾಡಲಾಗುತ್ತಿದೆ. ಗ್ರಾಹಕರು ಕುಳಿತುಕೊಳ್ಳುವ ಸ್ಥಳ ಹಾಗೂ ಬಳಸುವ ವಸ್ತುಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸಲಾಗಿದೆ.

ನನ್ನನ್ನು ನಂಬಿ ಬರುವ ಗ್ರಾಹಕರ ಹಿತದೃಷ್ಟಿ ಬಹಳ ಮುಖ್ಯ. ಮಂಗಳೂರಿನಿಂದ ಅಗತ್ಯ ಸಲಕರಣೆ ತರಿಸಿದ್ದು, ಒಂದು ಸಲಕ್ಕೆ ಸಾವಿರ ರೂ.ದಷ್ಟು ಸಾಮಗ್ರಿ ತರಿಸಬೇಕಾಗುತ್ತಿದೆ. ಒಬ್ಬರಿಗೆ ಕ್ಷೌರ ಮಾಡಿದ ನಂತರ ಗ್ಲೌಸ್‌, ಬಳಸಿದ ಬಟ್ಟೆ ಇತ್ಯಾದಿಗಳನ್ನು ಬದಲಾಯಿಸುತ್ತೇನೆ. ಪಿಪಿಇ ಕಿಟ್ ಸೇರಿದಂತೆ ಇತರ ವಸ್ತುಗಳ ವೆಚ್ಚವನ್ನು ನಾವೇ ಭರಿಸುತ್ತಿದ್ದು, ಗ್ರಾಹಕರಿಗೆ ಯಾವುದೇ ಹೊರೆ ಆಗುತ್ತಿಲ್ಲ. ಈ ಕ್ರಮದಿಂದ ನಮಗೂ, ನಮ್ಮ ಸಲೂನ್​ಗೆ ಬರುವವರಿಗೂ ಸೋಂಕು ಹರಡದಂತೆ ಎಚ್ಚರ ವಹಿಸಲಾಗುತ್ತಿದೆ ಎಂದು ಸಲೂನ್ ಮಾಲೀಕ ಅಲಿ ಕಲ್ಕತ್ತಾ ಹೇಳಿದ್ದಾರೆ.

ABOUT THE AUTHOR

...view details