ಭಟ್ಕಳ:ಸಂಸದ ಅನಂತ್ ಕುಮಾರ್ ಹೆಗಡೆ ಅವರು ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬಗ್ಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಖಂಡಿಸಿ ಸಂಸದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ರು.
ಸಂಸದರ ಬಾಯಿಯನ್ನು ದಬ್ಬಣದಿಂದ ಹೊಲಿಯಬೇಕು: ಜೆ.ಡಿ.ನಾಯ್ಕ
ಅನಂತ್ ಕುಮಾರ್ ಹೆಗಡೆ ಅವರ ಬಾಯಿಯನ್ನ ಗೋಣಿ ಚೀಲ ಹೊಲಿಯುವ ದಬ್ಬಣದಿಂದ ಹೊಲಿಯಬೇಕು ಎಂದು ಮಾಜಿ ಶಾಸಕ ಜೆ.ಡಿ.ನಾಯ್ಕ ಭಟ್ಕಳದಲ್ಲಿ ಹೇಳಿದ್ದಾರೆ.
ಮಾಜಿ ಶಾಸಕ ಜೆ.ಡಿ. ನಾಯ್ಕ ಮಾತನಾಡಿ, 6 ಬಾರಿ ಕ್ಷೇತ್ರದಿಂದ ಆಯ್ಕೆಗೊಂಡು ಸಂಸದರಾಗಿದ್ದು, ಇವರ ಟೀಕೆ ಟಿಪ್ಪಣಿಗೆ ಅವರ ಪಕ್ಷದಿಂದಲೇ ನೋಟಿಸ್ ನೀಡಿದ್ದಾರೆ. ಇವರ ಮಾತು ಸಂವಿಧಾನಕ್ಕೆ ಅಪಮಾನ ಮಾಡುವುದರೊಂದಿಗೆ, ಸ್ವಾತಂತ್ರ್ಯ ತಂದು ಕೊಟ್ಟ ನಾಯಕರಿಗೆ ಅವಮಾನ ಮಾಡಿದಂತಾಗಿದೆ. ನಾಯಕರು ಸೋಗಲಾಡಿತನದಿಂದ ಸ್ವಾತಂತ್ರ್ಯ ತಂದಿದ್ದಾರೆಂಬ ಹೇಳಿಕೆ ನೀಡಿದ ಸಂಸದರ ಬಾಯಿಗೆ ಗೋಣಿ ಚೀಲ ಹೊಲಿಯುವ ದಬ್ಬಣದಿಂದ ಬಾಯಿಯನ್ನು ಹೊಲಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಂತ್ ಕುಮಾರ್ ಹೆಗಡೆಯವರು ತಮ್ಮ ಭಾಷಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರದ್ದು ಬ್ರಿಟಿಷರ ಜೊತೆ ಒಪ್ಪಂದದ ಹೋರಾಟವಾಗಿತ್ತು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಗೆ ಹೊಡೆಯಿರಿ ಎಂಬ ಸೋಗಲಾಡಿತನದಿಂದ, ಸ್ವಾತಂತ್ರ್ಯ ಹೋರಾಟ ಮಾಡಿದ ಗಾಂಧೀಜಿಯವರು ಒಂದೇ ಒಂದು ಬಾರಿ ಲಾಠಿ ಏಟು ತಿನ್ನದ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯಿಸಿಕೊಳ್ಳುತ್ತಿರುವುದು ದುರಂತ ಎಂದು ಹೇಳಿ ತಮ್ಮ ಭಾಷಣದ ಉದ್ದಕ್ಕೂ ಗಾಂಧೀಜಿಯವರಿಗೆ ಅವಮಾನ ಮಾಡಿದ್ದಾರೆ ಎಂದರು.