ಭಟ್ಕಳ:ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ತಾಲೂಕಿನ ಎಲ್ಲ ಸೋಂಕಿತರನ್ನು ಇಲ್ಲಿನ ಹೆಬಳೆ ವುಮೆನ್ಸ್ ಸೆಂಟರ್ಗೆ ಸ್ಥಳಾಂತರಿಸಲಾಗಿದೆ.
ಭಟ್ಕಳದ ವುಮೆನ್ಸ್ ಸೆಂಟರ್ನಲ್ಲಿ ಕೋವಿಡ್ ಸೋಂಕಿತರ ಆರೈಕೆ ಪ್ರಾರಂಭ
ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಕೊರೊನಾ ಸೋಂಕಿತರ ಆರೈಕೆಯಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದು, ಹೆಬಳೆ ಪಂಚಾಯತ್ ವ್ಯಾಪ್ತಿಯ ಸುಸಜ್ಜಿತ ವುಮೆನ್ಸ್ ಸೆಂಟರ್ ಕಟ್ಟಡವನ್ನು ಸೋಂಕಿತರ ಆರೈಕೆ ಕೇಂದ್ರವನ್ನಾಗಿ ಮಾರ್ಪಡಿಸಲಾಗಿದೆ.
ಭಟ್ಕಳದ ವುಮೆನ್ಸ್ ಸೆಂಟರ್
ಈ ಹಿನ್ನೆಲೆಯಲ್ಲಿ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಕೊರೊನಾ ಸೋಂಕಿತರ ಆರೈಕೆಯಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದು, ಹೆಬಳೆ ಪಂಚಾಯತ್ ವ್ಯಾಪ್ತಿಯ ಸುಸಜ್ಜಿತ ವುಮೆನ್ಸ್ ಸೆಂಟರ್ ಕಟ್ಟಡವನ್ನು ಸೋಂಕಿತರ ಆರೈಕೆ ಕೇಂದ್ರವನ್ನಾಗಿ ಮಾರ್ಪಡಿಸಿದ್ದು, ಗರ್ಭಿಣಿ ಮಹಿಳೆ ಸೇರಿದಂತೆ 7 ಜನರನ್ನು ಸರ್ಕಾರಿ ಆಸ್ಪತ್ರೆಯಲ್ಲೇ ಇರಿಸಲಾಗಿದೆ ಎಂಬ ಮಾಹಿತಿ ದೊರಕಿದೆ.
ಶ್ರೀಮತಿ ಖದಿಜಾ ಖಾಜಿ ಹಾಗೂ ಅವರ ಪತಿ ಅಮೇರಿಕನ್ ಝುಬೈರ್ ತಮ್ಮ ಸುಸಜ್ಜಿತ ಕಟ್ಟಡವನ್ನು ಸೋಂಕಿತರ ಆರೈಕೆಯ ಕೇಂದ್ರವಾಗಿ ಬಿಟ್ಟುಕೊಡಲು ಮನಃ ಪೂರ್ವಕವಾಗಿ ಒಪ್ಪಿಕೊಂಡಿದ್ದು, ತಂಝೀಮ್ ಸಂಸ್ಥೆಯ ಮೇಲುಸ್ತುವಾರಿಯಲ್ಲಿ ಪ್ರ. ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ ಯವರು ಸುಮಾರು 100 ಹಾಸಿಗೆಯುಳ್ಳ ಕೋವಿಡ್-19 ಆರೈಕೆ ಕೇಂದ್ರವನ್ನು ಅತ್ಯಂತ ಪರಿಶ್ರಮದಿಂದ ಸಿದ್ದಗೊಳಿಸಿದ್ದು ಈಗ ಸೋಂಕಿತರಿಗಾಗಿ ತೆರೆದುಕೊಂಡಿದೆ.ಇಲ್ಲಿ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದ್ದು ಸೋಂಕಿತರೆಲ್ಲರೂ ಉತ್ತಮ ಆರೋಗ್ಯಯುತ ವಾತಾವರಣದಲ್ಲಿ ಆರೈಕೆ ಪಡೆಯಬಹುದಾಗಿದೆ.
ಇಲ್ಲಿಯೂ ವಿರೋಧಿಸಿದ ಸ್ಥಳೀಯರು:ಹೆಬಳೆ ಪಂಚಾಯತ್ ವ್ಯಾಪ್ತಿಯ ಈ ಕಟ್ಟಡದಲ್ಲಿ ಕೊರೊನಾ ಸೋಂಕಿತರನ್ನು ಸ್ಥಳಾಂತರಿಸಲಾಗುತ್ತಿದೆ ಎಂಬ ಸುದ್ದಿ ತಿಳಿದ ಈ ಭಾಗದ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ, ಇಲ್ಲಿ ಸೋಂಕಿತರನ್ನು ಸ್ಥಳಾಂತರಿಸುವುದು ಬೇಡ ಎಂದು ಪಟ್ಟು ಹಿಡಿದಿದ್ದು ಇಲ್ಲಿಯೂ ಕೂಡ ಪೊಲೀಸರು ಹಾಗೂ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಾರ್ವಜನಿಕರ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.