ಕರ್ನಾಟಕ

karnataka

ETV Bharat / state

ಅಲೆಗಳ ಅಬ್ಬರಕ್ಕೆ ಮುಳುಗಿದ ಬೋಟ್: ಕಾರವಾರದಲ್ಲಿ 6 ಮಂದಿ ಮೀನುಗಾರರ ರಕ್ಷಣೆ

ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಬೋಟ್​​​ನಲ್ಲಿದ್ದ 6 ಮಂದಿ ಮೀನುಗಾರರನ್ನು ಇತರ ಬೋಟ್​​​ನಲ್ಲಿದ್ದ ಮೀನುಗಾರರು ರಕ್ಷಣೆ ಮಾಡಿ ಮುದಗ ಬಂದರಿಗೆ ಕರೆ ತಂದಿದ್ದಾರೆ.

ಮುಳುಗುತ್ತಿದ್ದ ಬೋಟ್​​​ನಲ್ಲಿದ್ದ 6 ಮಂದಿ ಮೀನುಗಾರರ ರಕ್ಷಣೆ
ಮುಳುಗುತ್ತಿದ್ದ ಬೋಟ್​​​ನಲ್ಲಿದ್ದ 6 ಮಂದಿ ಮೀನುಗಾರರ ರಕ್ಷಣೆ

By

Published : Aug 6, 2021, 3:09 PM IST

ಕಾರವಾರ:ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಬೋಟ್​​​ನಲ್ಲಿದ್ದ 6 ಮಂದಿ ಮೀನುಗಾರರನ್ನು ಇತರ ಬೋಟ್​​​ನಲ್ಲಿದ್ದ ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಬೇಲೆಕೇರಿ ಬಳಿ ಸಮುದ್ರದಲ್ಲಿ ನಡೆದಿದೆ.

ಮುಳುಗುತ್ತಿದ್ದ ಬೋಟ್​​​ನಲ್ಲಿದ್ದ 6 ಮಂದಿ ಮೀನುಗಾರರ ರಕ್ಷಣೆ

ತದಡಿಯ ಶಂಕರ ಹರಿಕಂತ್ರ ಮಾಲೀಕತ್ವದ ಶಾಂತಿಕಾ ಪರಮೇಶ್ವರಿ ಹೆಸರಿನ ಬೋಟ್​​ ಮುಳುಗುವ ಹಂತದಲ್ಲಿತ್ತು. ಬೋಟ್​​​ನಲ್ಲಿದ್ದ ಶಂಕರ ಬೀರಪ್ಪ ಹರಿಕಂತ್ರ, ಮನೋಜ್​ ಶಂಕರ ಹರಿಕಂತ್ರ, ದೇವದಾಸ ನಾಗಪ್ಪ ಹರಿಕಂತ್ರ, ಮಹೇಂದ್ರ ಶಂಕರ ನಾಯ್ಕ, ಬೀರು ಹನುಮಂತ ಗೌಡಾ ಹಾಗೂ ಬೀರಾ ಮಾಸ್ತಿ ಗೌಡ ರಕ್ಷಣೆಗೊಳಗಾದ ಮೀನುಗಾರರು.

ಗುರುವಾರ ಸಂಜೆ ವೇಳೆ ಬೋಟ್​​ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಅಲೆಗಳ ಅಬ್ಬರ ಹೆಚ್ಚಿದ್ದ ಪರಿಣಾಮ ಬೋಟ್​​​ಗೆ ಹಾನಿಯಾಗಿ ನೀರು ತುಂಬಿಕೊಳ್ಳಲು ಪ್ರಾರಂಭಿಸಿತ್ತು. ಕೂಡಲೇ ಬೋಟ್‌ನಲ್ಲಿದ್ದವರು ರಕ್ಷಣೆಗೆ ಮನವಿ ಮಾಡಿದ್ದು, ಈ ವೇಳೆ, ಹತ್ತಿರದಲ್ಲಿದ್ದ ದೇವಿಕೃಪಾ ಹೆಸರಿನ ಬೋಟ್​​ನವರು ಮುಳುಗುತ್ತಿದ್ದ ಬೋಟ್​​ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿ ಮುದಗ ಬಂದರಿಗೆ ಕರೆ ತಂದಿದ್ದಾರೆ.

ಈ ವೇಳೆ, ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಕರಾವಳಿ ಕಾವಲು ಪಡೆಯ ಸಿಪಿಐ ನಿಶ್ಚಲ ಕುಮಾರ, ಮೀನುಗಾರಿಕೆ ಸಹಾಯಕ ಅಧಿಕಾರಿ ವಿದ್ಯಾಧರ ಹರಿಕಂತ್ರ ಭೇಟಿ ನೀಡಿ ಮೀನುಗಾರರಿಗೆ ಅಗತ್ಯ ನೆರವು ನೀಡಿದ್ದಾರೆ.

ಇದನ್ನೂ ಒದಿ:ಮನವಿ ಪತ್ರ ಹಿಡಿದು ಶಬರಿಯಂತೆ ಕಾದ ವೃದ್ಧೆಯ ಮೊಗದಲ್ಲಿ ನಗು ಅರಳಿಸಿದ ಬೊಮ್ಮಾಯಿ

ABOUT THE AUTHOR

...view details