ಕರ್ನಾಟಕ

karnataka

ETV Bharat / state

ಬೈಕ್ ನಿಯಂತ್ರಣ ತಪ್ಪಿ ಬಿದ್ದು ಸವಾರ ಸಾವು - bike accident

ಇಳಿಜಾರು ರಸ್ತೆಯ ತಿರುವಿನಲ್ಲಿ ವೇಗವಾಗಿ ಬರುತ್ತಿರುವ ವೇಳೆ ನಿಯಂತ್ರಿಸಲಾಗದೆ ಬೈಕ್ ಪಲ್ಟಿಯಾಗಿ ಬಿದ್ದಿದೆ. ಪರಿಣಾಮವಾಗಿ ಬೈಕ್ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡಿದ್ದಾನೆ.

death
death

By

Published : Nov 2, 2020, 9:59 PM IST

ಭಟ್ಕಳ (ಉತ್ತರ ಕನ್ನಡ):ತಾಲೂಕಿನ ಯಲ್ವಡಿಕವರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಣಂದೂರಿನ ಇಳಿಜಾರು ರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿ ಸೌಬಾನ್ ಎಸ್.ಎಂ (33) ಎಂದು ತಿಳಿದು ಬಂದಿದೆ.

ಬೈಕ್ ಸವಾರ ಸಾವು

ಈತ ತನ್ನ ಸ್ನೇಹಿತನ ಜೊತೆಗೆ ಸಾಗರ ರೋಡ್ ಮೂಲಕ ಕುಂಟವಾಣಿಯ ಬೆಣಂದೂರಿನ ಮಾರ್ಗವಾಗಿ ಬೈಕ್ ಮೂಲಕ ತೆರಳುತ್ತಿದ್ದ ವೇಳೆ ಬೆಣಂದೂರಿನ ಇಳಿಜಾರು ರಸ್ತೆಯ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ವೇಳೆ ನಿಯಂತ್ರಿಸಲಾಗದೆ ಬೈಕ್ ಪಲ್ಟಿಯಾಗಿ ಬಿದ್ದಿದೆ.

ಪರಿಣಾಮವಾಗಿ ಬೈಕ್ ಹಿಂಬದಿ ಸವಾರನ ಬೆನ್ನು ಹಾಗೂ ಸೊಂಟದ ಭಾಗಕ್ಕೆ ಪೆಟ್ಟು ಬಿದ್ದಿದೆ. ಬೈಕ್ ಸವಾರನ ತಲೆಗೆ ಬಲವಾಗಿ ಪೆಟ್ಟು ಬಿದ್ದ ಪರಿಣಾಮ ಸ್ಥಳೀಯರು ಈತನನ್ನು ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಉಡುಪಿ ಆಸ್ಪತ್ರೆಗೆ ಸಾಗಿಸುತ್ತಿರುವ ವೇಳೆ ಮಾರ್ಗ ಮಧ್ಯ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details