ಕರ್ನಾಟಕ

karnataka

ETV Bharat / state

ಭಟ್ಕಳ: ಹಳಿ ದಾಟುವಾಗ ರೈಲು ಬಡಿದು ವ್ಯಕ್ತಿ ಸಾವು! - Bhatkal

ಹಳಿ ದಾಟುತ್ತಿದ್ದ ವ್ಯಕ್ತಿಗೆ ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಭಟ್ಕಳ ತಾಲೂಕಿನ ಸಣಬಾವಿ ಬೇಂಗ್ರೆ ನಿವಾಸಿ ರಾಜು ಮಾಸ್ತಿ ಮೊಗೇರ ಮೃತ ವ್ಯಕ್ತಿ.

Bhatkal
ರಾಜು ಮಾಸ್ತಿ ಮೊಗೇರ

By

Published : Mar 14, 2021, 8:30 AM IST

ಭಟ್ಕಳ: ರೈಲ್ವೆ ಹಳಿ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಮುರ್ಡೇಶ್ವರದ ಬಸ್ತಿಮಕ್ಕಿಯ ರೈಲ್ವೆ ಸೇತುವೆ ಬಳಿ ನಡೆದಿದೆ.

ತಾಲೂಕಿನ ಸಣಬಾವಿ ಬೇಂಗ್ರೆ ನಿವಾಸಿ ರಾಜು ಮಾಸ್ತಿ ಮೊಗೇರ ಮೃತ ವ್ಯಕ್ತಿ. ಇವರು ರಾತ್ರಿ 10:45ರಿಂದ ಬೆಳಗ್ಗೆ 6 ಗಂಟೆಯ ಮಧ್ಯೆ ಹಳಿ ದಾಟುವ ವೇಳೆ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸುದ್ದಿ ತಿಳಿದು ಮುರ್ಡೇಶ್ವರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಪರಿಶೀಲಿಸಿ, ಸ್ಥಳದಲ್ಲಿದ್ದ ಮೊಬೈಲ್ ಸಹಾಯದಿಂದ ಮೃತನ ಸಂಬಂಧಿಕರನ್ನು ಪತ್ತೆಹಚ್ಚಿದ್ದಾರೆ

ಈ ಬಗ್ಗೆ ಶೇಖರ ಮಾಸ್ತಿ ಮೊಗೇರ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ABOUT THE AUTHOR

...view details