ಕರ್ನಾಟಕ

karnataka

ETV Bharat / state

ಜ್ವರ ಮತ್ತಿತರ ಸಣ್ಣ-ಪುಟ್ಟ ಕಾಯಿಲೆಗೆ ಹೆದರಬೇಡಿ; ಭಟ್ಕಳ ಜಮಾತುಲ್​ ಮುಖಂಡರ ಮನವಿ

ಜ್ವರ ಮತ್ತಿತರ ಸಣ್ಣ-ಪುಟ್ಟ ಕಾಯಿಲೆಗಳಿಗೆ ಜನರು ಹೆದರುವ ಅವಶ್ಯಕತೆಯಿಲ್ಲ. ಇದಕ್ಕೆಲ್ಲ ನಿಮ್ಮ ಕುಟುಂಬ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ. ರೋಗದ ಲಕ್ಷಣಗಳನ್ನು ಆಧರಿಸಿ ಅವರು ನಿಮಗೆ ಚಿಕಿತ್ಸೆ ಮತ್ತು ಸಲಹೆ ನೀಡುತ್ತಾರೆ ಎಂದು ಭಟ್ಕಳದ ಜಮಾತುಲ್​ನ ಮುಖಂಡರು ಹಾಗೂ ಧಾರ್ಮಿಕ ವಿದ್ವಾಂಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Bhatkal amaatul leaders  corona awareness
ಜ್ವರ ಮತ್ತಿತರ ಸಣ್ಣ-ಪುಟ್ಟ ಕಾಯಿಲೆಗೆ ಹೆದರಬೇಡಿ: ಸಾರ್ವಜನಿಕರಲ್ಲಿ ಭಟ್ಕಳ ಜಮಾಅತುಲ್​ ಮುಖಂಡರ ಮನವಿ

By

Published : Jul 20, 2020, 4:52 PM IST

ಭಟ್ಕಳ (ಉತ್ತರ ಕನ್ನಡ):ಜ್ವರ ಮತ್ತಿತರ ಸಣ್ಣ-ಪುಟ್ಟ ಕಾಯಿಲೆಗಳಿಗೆ ಜನರು ಹೆದರುವ ಅವಶ್ಯಕತೆಯಿಲ್ಲ. ಇದಕ್ಕೆಲ್ಲ ನಿಮ್ಮ ಕುಟುಂಬ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ. ರೋಗದ ಲಕ್ಷಣಗಳನ್ನು ಆಧರಿಸಿ ಅವರು ನಿಮಗೆ ಚಿಕಿತ್ಸೆ ಮತ್ತು ಸಲಹೆ ನೀಡುತ್ತಾರೆ. ಇದಕ್ಕೆ ತಾಲೂಕಾಡಳಿತವೂ ಕೂಡ ಸಹಕಾರ ನೀಡಲಿದೆ ಎಂದು ಭಟ್ಕಳದ ಜಮಾತುಲ್​ನ ಮುಖಂಡರು ಹಾಗೂ ಧಾರ್ಮಿಕ ವಿದ್ವಾಂಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜ್ವರ ಮತ್ತಿತರ ಸಣ್ಣ-ಪುಟ್ಟ ಕಾಯಿಲೆಗೆ ಹೆದರಬೇಡಿ: ಸಾರ್ವಜನಿಕರಲ್ಲಿ ಭಟ್ಕಳ ಜಮಾಅತುಲ್​ ಮುಖಂಡರ ಮನವಿ

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಟ್ಕಳ ಮರ್ಕಝಿ ಖಲೀಫಾ ಜಮಾತುಲ್ ಮುಸ್ಲಿಮೀನ್ ಪ್ರಧಾನ ಖಾಜಿ, ಕೊರೊನಾ ಸೋಂಕು ಕುರಿತಂತೆ ಜನರಲ್ಲಿ ಭಯ ಉಂಟಾಗಿದೆ. ಜ್ವರ ಬಂದರೂ ಕೂಡ ವೈದ್ಯರಲ್ಲಿ ಹೋಗಲು ಜನ ಹೆದರುತ್ತಿದ್ದಾರೆ. ಯಾರೂ ಕೂಡ ಹೆದರಬೇಕಾಗಿಲ್ಲ. ನಿಮ್ಮ ಕುಟುಂಬ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ. ಕೊರೊನಾ ರೋಗದ ಲಕ್ಷಣಗಳಿದ್ದರೆ ಅವರು ನಿಮಗೆ ಸಲಹೆಯನ್ನು ನೀಡುತ್ತಾರೆ. ಈ ಕುರಿತಂತೆ ಇಲ್ಲಿನ ವಿವಿಧ ಮುಖಂಡರು ಹಾಗೂ ಧಾರ್ಮಿಕ ವಿದ್ವಾಂಸರ ನಿಯೋಗವು ತಾಲೂಕಾಡಳಿತವನ್ನು ಭೇಟಿಯಾಗಿ ಜನರಲ್ಲಿ ಮನೆ ಮಾಡಿಕೊಂಡಿದ್ದ ಭಯದ ಕಾರಣವನ್ನು ವಿವರಿಸಿದ್ದಾರೆ. ಅಲ್ಲದೆ ಫ್ಯಾಮಿಲಿ ವೈದ್ಯರಿಗೆ ಚಿಕಿತ್ಸೆ ನೀಡಲು ಅನುಮತಿಯನ್ನು ನೀಡಿದ್ದಾರೆ ಎಂದರು.

ಅಲಿಮಿಯಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲಿಯಾಸ್ ನದ್ವಿ ಮಾತನಾಡಿ, ಕಳೆದ ಐದಾರು ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಜನರಲ್ಲಿ ಭಯವನ್ನು ಹುಟ್ಟಿಸಿದೆ. ನಾವು ಯಾವುದೇ ಕಾರಣಕ್ಕೂ ಹೆದರಬೇಕಾಗಿಲ್ಲ ಮತ್ತು ಕಳವಳ ಪಡಬೇಕಾಗಿಲ್ಲ. ಸೀಸನಲ್ ಜ್ವರ, ನೆಗಡಿ ಕೆಮ್ಮುಗಳಿಂದಾಗಿ ಜನರು ಹೆದರಿಕೊಂಡಿದ್ದಾರೆ. ಇದಕ್ಕಾಗಿ ನಾವು ತಾಲೂಕಾಡಳಿತದೊಂದಿಗೆ ಮಾತುಕತೆ ನಡೆಸಿ, ಕುಟುಂಬ ವೈದ್ಯರಿಗೆ ಚಿಕಿತ್ಸೆ ನೀಡಲು ಅನುಮತಿಯನ್ನು ಕೊಡುವಂತೆ ಕೇಳಿಕೊಂಡಿದ್ದೇವೆ. ಇದಕ್ಕೆ ಇಲಾಖೆ ಕೂಡ ಉತ್ತಮವಾಗಿ ಸ್ಪಂಧಿಸಿದೆ. ಹಾಗಾಗಿ ಯಾರೂ ಕೂಡ ಜ್ವರಕ್ಕೆ ಹೆದರಿಕೊಳ್ಳದೆ, ತಮ್ಮ ಫ್ಯಾಮಿಲಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಮಾಡಿಕೊಳ್ಳಿ. ಒಂದು ವೇಳೆ ಕೊರೊನಾ ಸೋಂಕು ದೃಡಪಟ್ಟರೆ ಮಾತ್ರ ಸರ್ಕಾರ ನೀಡುವ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದರು.

ABOUT THE AUTHOR

...view details