ಕಾರವಾರ: ಮೀನು ಹಿಡಿಯಲು ತೆರಳುತ್ತಿದ್ದ ನಾಲ್ವರ ಮೇಲೆ ಕರಡಿ ದಾಳಿ ಮಾಡಿದ ಘಟನೆ ಮುಂಡಗೋಡ-ಶಿಗ್ಗಾವಿ ಗಡಿಭಾಗದ ದುಂಡಸಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೀನು ಹಿಡಿಯಲು ತೆರಳುತ್ತಿದ್ದವರ ಮೇಲೆ ಕರಡಿ ದಾಳಿ : ಮೂವರಿಗೆ ಗಾಯ - ಕರಡಿ ದಾಳಿ
ನಾಲ್ವರು ಸೇರಿ ಮೀನು ಹಿಡಿಯಲು ನ್ಯಾಸರ್ಗಿ ಬಳಿಯ ಡ್ಯಾಮ್ಗೆ ಅರಣ್ಯ ಪ್ರದೇಶ ಮಾರ್ಗವಾಗಿ ತೆರಳುತ್ತಿರುವಾಗ ಕರಡಿ ಏಕಾಏಕಿ ದಾಳಿ ಮಾಡಿದೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಕಾಳಪ್ಪನನ್ನು ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರಡಿ ದಾಳಿ
ಘಟನೆಯಲ್ಲಿ ಮುಂಡಗೋಡ ತಾಲೂಕಿನ ಗೌಳಿ ದಡ್ಡಿಯ ನ್ಯಾಸರ್ಗಿ ಪ್ಲಾಟಿನ ಕಾಳಪ್ಪ ಭೋವಿ ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ತಿರುಪತಿ ಪೂಜಾರ್, ವೆಂಕಪ್ಪ ಬೋವಿ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.