ಕರ್ನಾಟಕ

karnataka

ETV Bharat / state

ಉಡುಪಿ ಕೃಷ್ಣನ ಭಕ್ತರಿಗೆ ಸಂತಸದ ಸುದ್ದಿ: ಅಪರೂಪದ ವಸ್ತುಗಳ ವೀಕ್ಷಣೆಗೆ ಅವಕಾಶ - ದೇಗುಲದಲ್ಲಿ ಭಕ್ತರಿಗಾಗಿ ವಸ್ತು ಸಂಗ್ರಹಾಲಯ

ಉಡುಪಿ ಶ್ರೀಕೃಷ್ಣ ಮಠದ ಪಕ್ಕದಲ್ಲಿ ಇರುವ ರಾಜಾಂಗಣದ ಮೇಲಿನ‌ ಮಹಡಿಯಲ್ಲಿ ಈ ಹಳೆಯ ಕಾಲದ ಅಪರೂಪದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದ್ದು, ಭಕ್ತರು ಉಚಿತವಾಗಿ ವಸ್ತುಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ.

The Udupi Krishna Math Museum
ಉಡುಪಿ ಕೃಷ್ಣ ಮಠದಲ್ಲಿ ಭಕ್ತರಿಗಾಗಿ ವಸ್ತು ಸಂಗ್ರಹಾಲಯ

By

Published : Jan 24, 2021, 1:32 PM IST

ಉಡುಪಿ: ಇಷ್ಟು ದಿನ ಕೃಷ್ಣ ಮಠಕ್ಕೆ ಬಂದು ಗೋಪಾಲನ ದರ್ಶನ ಪಡೆದು ಹೋಗುತ್ತಿದ್ದ ಭಕ್ತರು ಇನ್ನು ಮುಂದೆ ಹಳೆ ಕಾಲದ ಅಪರೂಪದ ವಸ್ತುಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಪರ್ಯಾಯ ಅದಮಾರು ಈಶಪ್ರಿಯ ಸ್ವಾಮೀಜಿ ಕಲ್ಪಿಸಿದ್ದಾರೆ.

ಉಡುಪಿ ಕೃಷ್ಣ ಮಠದಲ್ಲಿ ಭಕ್ತರಿಗಾಗಿ ವಸ್ತು ಸಂಗ್ರಹಾಲಯ

ದೇಗುಲದಲ್ಲಿ ಭಕ್ತರಿಗಾಗಿ ವಸ್ತು ಸಂಗ್ರಹಾಲಯ ಮಾಡಲಾಗಿದೆ. ಇದರಲ್ಲಿ ಚೆನ್ನೆಮನೆ, ಗದ್ದೆ ಉಳುವ ನೇಗಿಲು, ಮರದ ಸೌಟು, ಕೆಂಡದ ಇಸ್ತ್ರಿ ಪೆಟ್ಟಿಗೆ, ಗದ್ದೆಗೆ ನೀರು ಹಾಯಿಸಲು ಅನುಕೂಲ ಆಗುವ ಮರದ ಸಾಮಾಗ್ರಿ, ಕಂಬಳದ ಕೋಣಗಳಿಗೆ ಬಳಸುವ ಪರಿಕರಗಳು ಸೇರಿದಂತೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಉಡುಪಿ ಕೃಷ್ಣ ಮಠದ ಪಕ್ಕದಲ್ಲಿ ಇರುವ ರಾಜಾಂಗಣದ ಮೇಲಿನ‌ ಮಹಡಿಯಲ್ಲಿ ಈ ಹಳೆಯ ಕಾಲದ ಅಪರೂಪದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಪರ್ಯಾಯದ ಪಂಚ ಶತಮಾನ ದಿನದಿಂದ ಈ ಸೌಲಭ್ಯ ಕಲ್ಪಿಸಲಾಗಿದ್ದು, ಭಕ್ತರು ಉಚಿತವಾಗಿ ವಸ್ತುಗಳನ್ನು ನೋಡಬಹುದಾಗಿದೆ.

ಈ ವಸ್ತು ಸಂಗ್ರಹಾಲಯದಲ್ಲಿ ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಬಳಸುತ್ತಿದ್ದ ವಸ್ತುಗಳನ್ನೇ ಹೆಚ್ಚಾಗಿ ಇಡಲಾಗಿದ್ದು, ದೂರದ ಊರುಗಳಿಂದ ಬರುವ ಭಕ್ತರು, ಈಗಿನ ಕಾಲದಲ್ಲಿ ಕಾಣಸಿಗದ ವಸ್ತುಗಳನ್ನು ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಕರ ಕುಶುಲ ವಸ್ತುಗಳ ಮಳಿಗೆಯನ್ನು ತೆರೆಯಲಾಗಿದ್ದು, ಇದಕ್ಕೂ ಭಕ್ತರು ಭೇಟಿ ನೀಡಿ ವಿಶೇಷ ವಸ್ತುಗಳನ್ನು ಖರೀದಿ ಮಾಡಬಹುದು.

ABOUT THE AUTHOR

...view details