ಕರ್ನಾಟಕ

karnataka

ETV Bharat / state

ಮಕ್ಕಳ ಸುರಕ್ಷತೆ ವಿಷದಲ್ಲಿ ರಾಜಿ ಇಲ್ಲ: ಆಟೋ, ಕ್ಯಾಬ್​ ಚಾಲಕರಿಗೆ ವಾರ್ನಿಂಗ್ - cab

ಆಟೋ, ಕ್ಯಾಬ್​​ಗಳಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳ ಸುರಕ್ಷೆ ವಿಚಾರವಾಗಿ ಉಡುಪಿಯಲ್ಲಿ ಸಮಾಲೋಚನಾ ಸಭೆ ನಡೆಯಿತು. ಮಕ್ಕಳ ಸುರಕ್ಷತೆಯ ವಿಷಯದಲ್ಲಿ ನಿಯಮ ಪಾಲಿಸುವಂತೆ ಚಾಲಕರಿಗೆ ಎಚ್ಚರಿಕೆ.

ಮಕ್ಕಳ ಸುರಕ್ಷತೆ ವಿಷದಲ್ಲಿ ಯಾವುದೇ ರಾಜಿ ಇಲ್ಲ

By

Published : Jun 27, 2019, 4:00 AM IST

ಉಡುಪಿ:ಆಟೋ, ಕ್ಯಾಬ್​ಗಳಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳ ಸುರಕ್ಷೆ ವಿಚಾರವಾಗಿ ಉಡುಪಿಯಲ್ಲಿ ಸಮಾಲೋಚನಾ ಸಭೆ ನಡೆಯಿತು. ಇಲ್ಲಿನ ಐಬಿಯಲ್ಲಿ ನಡೆದ ಆಟೊ, ಕ್ಯಾಬ್ ಚಾಲಕ ಮಾಲೀಕರ ಸಭೆಯ ನೇತೃತ್ವವನ್ನು ಶಾಸಕ ರಘುಪತಿ ಭಟ್ ವಹಿಸಿದ್ದರು.

ಶಾಲಾ ಆಟೋಗಳಿಗೆ ವಾರ್ನಿಂಗ್

ಈ ಸಾಲಿನ ಶಾಲಾ ಕಾಲೇಜುಗಳು ಪ್ರಾರಂಭವಾದ ಬಳಿಕ ಆಟೋ ಮತ್ತು ಕ್ಯಾಬ್ ಚಾಲಕರ ನಿರ್ಲಕ್ಷ್ಯದ ವಿರುದ್ಧ ಪೋಷಕರ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ತುರ್ತಾಗಿ ಈ ಸಭೆ ಕರೆಯಲಾಗಿತ್ತು. ಮುಖ್ಯವಾಗಿ ಆಟೋದಲ್ಲಿ ಆರು ವಿದ್ಯಾರ್ಥಿಗಳಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯಬಾರದು ಎಂಬ ನಿಯಮ ಇದೆ. ಆಟೋಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ಪ್ರಮುಖ ದೂರು.

ಸಭೆಯಲ್ಲಿ ಈ ಕುರಿತು ಸಮಾಲೋಚನೆ, ವಿಚಾರ ವಿನಿಮಯ ನಡೆಯಿತು. ನಿಯಮ ಪಾಲಿಸುವಂತೆ ಸಭೆಯಲ್ಲಿ ಟ್ರಾಫಿಕ್ ಪೊಲೀಸರು ಕಟ್ಟುನಿಟ್ಟಿನ‌ ಸೂಚನೆ ನೀಡಿದ್ರು. ಮಕ್ಕಳ ಸುರಕ್ಷೆ ವಿಷಯದಲ್ಲಿ ಯಾವುದೇ ರಾಜಿ ಮಾಡದೆ ನಿಯಮ ಪಾಲಿಸುವಂತೆ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಲಾಯಿತು.

ಪ್ರತಿ ಆಟೋ, ಕ್ಯಾಬ್​​ಗಳಲ್ಲಿ ಸಂಚರಿಸುವ ಮಕ್ಕಳ ಹೆಸರು, ರಕ್ತದ ಗುಂಪು ಸಹಿತ ಪ್ರತಿಯೊಂದನ್ನೂ ತೂಗು ಹಾಕಬೇಕು ಎಂದೂ ತಾಕೀತು ಮಾಡಲಾಯಿತು.

ABOUT THE AUTHOR

...view details