ಉಡುಪಿ:ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಗ್ರಾಮ ಪಂಚಾಯತ್ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ.. ಗ್ರಾಮ ಪಂಚಾಯತ್ ಸದಸ್ಯ ಅಂದರ್ - ಗ್ರಾಮ ಪಂಚಾಯತ್ ಸದಸ್ಯ
ಗ್ರಾಮ ಪಂಚಾಯತ್ ಸದಸ್ಯ 14 ವರ್ಷದ ಬಾಲಕನೋರ್ವನನ್ನು ನಿರ್ಮಾಣ ಹಂತದ ಮನೆಯೊಂದಕ್ಕೆ ಕರೆದೊಯ್ದು ಆತನ ಮೇಲೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ ಎನ್ನಲಾಗಿದೆ.
ಗ್ರಾಮ ಪಂಚಾಯತ್ ಸದಸ್ಯ
ಬೈಂದೂರು ತಾಲೂಕು ವ್ಯಾಪ್ತಿಯ ಕೆರ್ಗಾಲ್ ಗ್ರಾ.ಪಂ ಸದಸ್ಯ ರಮೇಶ್ ಗಾಣಿಗ ಮೊಗೇರಿ (38) ಬಂಧಿತ ಆರೋಪಿ. 14 ವರ್ಷದ ಬಾಲಕನೋರ್ವನನ್ನು ನಿರ್ಮಾಣ ಹಂತದ ಮನೆಯೊಂದಕ್ಕೆ ಕರೆದೊಯ್ದು ಆತನ ಮೇಲೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ ಎನ್ನಲಾಗಿದೆ.
ಘಟನೆ ಸಂದರ್ಭದಲ್ಲಿ ಬಾಲಕ ಕೂಗಾಡಿ ಅಲ್ಲಿಂದ ತಪ್ಪಿಸಿಕೊಂಡಿದ್ದ. ಈ ಬಗ್ಗೆ ಸಂತ್ರಸ್ತ ಬಾಲಕ ಮನೆಯಲ್ಲಿ ತಿಳಿಸಿದ ಬಳಿಕ ಮನೆಯವರು ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.