ಕರ್ನಾಟಕ

karnataka

ETV Bharat / state

ಈ ಬಾರಿ ಡೀ ಮನ್ ರೂಪದಲ್ಲಿ ಅಬ್ಬರಿಸಿದ ಉಡುಪಿಯ ರವಿ ಕಟಪಾಡಿ - Ravi Katapadi wear Dee Man costume

ರವಿ ಕಟಪಾಡಿ ಅವರು ಕಳೆದ ಏಳು ವರ್ಷಗಳಿಂದ ಕೃಷ್ಣಾಷ್ಟಮಿಯಂದು ವಿವಿಧ ವೇಷ ಹಾಕಿ ತಮ್ಮ ತಂಡದೊಂದಿಗೆ ಪ್ರದರ್ಶನ ನೀಡಿ, ಸಂಗ್ರಹಿಸಿದ ಹಣದಿಂದ ಮಕ್ಕಳ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ.

Ravi Katapadi wear Dee Man costume
ಈ ಬಾರಿ ಡೀ ಮನ್ ರೂಪದಲ್ಲಿ ಅಬ್ಬರಿಸಿದ ರವಿ ಕಟಪಾಡಿ

By

Published : Aug 20, 2022, 5:32 PM IST

ಉಡುಪಿ : ಕೃಷ್ಣ ಜನ್ಮಾಷ್ಟಮಿ ಬಂದರೆ ಸಾಕು ವೇಷಗಳ ಅಬ್ಬರ ಶುರುವಾಗುತ್ತೆ. ಉಡುಪಿಯ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿ ವಿಚಿತ್ರ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಡೀ ಮನ್ ರೂಪದಲ್ಲಿ ಉಡುಪಿಯ ಗಲ್ಲಿ ಗಲ್ಲಿಯಲ್ಲಿ ಅಬ್ಬರಿಸುತ್ತಿದ್ದಾರೆ.

ತನ್ನ ವಿಶೇಷ ಅಬ್ಬರದ ವೇಷಭೂಷಣಗಳೊಂದಿಗೆ ಜನಪ್ರಿಯವಾಗಿರುವ, ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ದುಡ್ಡು ಸಂಗ್ರಹಿಸಿ ಬಡಮಕ್ಕಳಿಗೆ ವೈದ್ಯಕೀಯ ನೆರವು ನೀಡುತ್ತಿರುವ ಉಡುಪಿಯ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿಯೂ ವಿಶೇಷ ವೇಷದೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕೃಷ್ಣಾಷ್ಟಮಿಯಲ್ಲಿ 'ಡೀ ಮನ್' ರಾಕ್ಷಸ ವೇಷ ಹಾಕಿದ್ದು, ದುಡ್ಡು ಸಂಗ್ರಹಿಸಿ ಅನಾರೋಗ್ಯ ಪೀಡಿತರಿಗೆ, ಅಸಹಾಯಕರಿಗೆ ನೆರವಾಗಲಿದ್ದಾರೆ.

ಈ ಬಾರಿ ಡೀ ಮನ್ ರೂಪದಲ್ಲಿ ಅಬ್ಬರಿಸಿದ ರವಿ ಕಟಪಾಡಿ

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ರವಿ ಅವರು, ಕಳೆದ ಏಳು ವರ್ಷಗಳಿಂದ ಕೃಷ್ಣಾಷ್ಟಮಿಯಂದು ವೇಷ ಹಾಕಿ ನನ್ನ ತಂಡದೊಂದಿಗೆ ಪ್ರದರ್ಶನ ನೀಡುತ್ತಿದ್ದೇನೆ. ಈ ಬಾರಿ ಏಂಟನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದೇನೆ. ಇದುವರೆಗೆ ನಾವು 90 ಲಕ್ಷ ರೂಪಾಯಿಯಷ್ಟು ಹಣವನ್ನು ಸಂಗ್ರಹಣೆ ಮಾಡಿದ್ದು, ಸುಮಾರು 66 ಮಕ್ಕಳ ಚಿಕಿತ್ಸೆಗಾಗಿ ದುಡ್ಡನ್ನು ನೀಡಿದ್ದೇವೆ. ಅನೇಕ ಅನಾರೋಗ್ಯ ಪೀಡಿತ ಮಕ್ಕಳ ಪಟ್ಟಿಗಳು ನಮಗೆ ಬಂದಿದ್ದು, ಅವರೆಲ್ಲರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ. ಹೀಗಾಗಿ ಎಲ್ಲರೂ ಕೂಡ ಹೆಚ್ಚಿನ ರೀತಿಯ ಸಹಕಾರವನ್ನು ನೀಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ :ಕಲಿಯುಗ ಕರ್ಣ ರವಿ ಕಟಪಾಡಿ: ಹಾಲಿವುಡ್​ ವೇಷ ಧರಿಸಿ ಮಿಂಚಿದ ಕೂಲಿ ಕಾರ್ಮಿಕ

ABOUT THE AUTHOR

...view details