ಉಡುಪಿ:ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿದ್ದ ಆರೋಪಿಯೊಬ್ಬ ಪರಾರಿಯಾದ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಕೊಲೆ: ಜೈಲಿಗೆ ಕರೆದೊಯ್ಯುವಾಗ ಆರೋಪಿ ಪರಾರಿ - escape
ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಕಾಮುಕ. ನ್ಯಾಯಾಧೀಶರಿಂದ ಹದಿನಾಲ್ಕು ದಿನದ ನ್ಯಾಯಾಂಗ ಬಂಧನ. ಜೈಲಿಗೆ ಕರೆದೊಯ್ಯುವಾಗ ಆರೋಪಿ ಎಸ್ಕೇಪ್
ಪರಾರಿ
ಹನುಮಂತಪ್ಪ(30) ಪರಾರಿಯಾದ ಆರೋಪಿ. ಈತ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಆರೋಪಿಯನ್ನು ನಿನ್ನೆ ನ್ಯಾಯಾಧೀಶರ ಸಮ್ಮುಖ ಹಾಜರು ಪಡಿಸಲಾಗಿದ್ದು, ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ವೇಳೆ ಜೈಲಿಗೆ ಕರೆದೊಯ್ಯುವಾಗ ಆರೋಪಿ ಹನುಮಂತ ಎಸ್ಕೇಪ್ ಆಗಿದ್ದಾನೆ.
ಪರಾರಿಯಾದ ಆರೋಪಿ ಜೈಲು ಆವರಣದ ಅರಣ್ಯ ಪ್ರದೇಶದಲ್ಲಿ ಅಡಗಿರುವ ಸಾಧ್ಯತೆಯಿದ್ದು, ಹಿರಿಯಡ್ಕ ಹಾಗೂ ಮಣಿಪಾಲ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.