ಉಡುಪಿ;ಹೆಬ್ಬಾವು ಮತ್ತು ಕಾಳಿಂಗ ಸರ್ಪ ಎರಡು ಕೂಡಾ ಕಾದಾಟ ನಡೆಸಿದ ದೃಶ್ಯ ಕುಂದಾಪುರ ತಾಲೂಕ್ ಯಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಕಂಡುಬಂದಿದೆ. ಇವೆರಡರ ನಡುವಿನ ಕಾದಾಟದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೆಬ್ಬಾವು-ಕಾಳಿಂಗ ಸರ್ಪದ ಕಾದಾಟ; ಕ್ಯಾಮೆರಾದಲ್ಲಿ ಸೆರೆಯಾಯ್ತು ರೋಚಕ ದೃಶ್ಯ...!
ಹಾವುಗಳಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಎರಡು ಕೂಡಾ ಬಲಿಷ್ಠವಾದವು ಎಂದೆ ಗುರುತಿಸಿಕೊಂಡಿವೆ. ಒಂದು ಉಸಿರಿಗಟ್ಟಿಸಿ ಆಹಾರ ಕಬಳಿಸಿದರೆ,ಇನ್ನೊಂದು ಕಚ್ಚಿ ವಿಷ ಏರಿಸಿ ಆಹಾರ ಸೇವಿಸುತ್ತೆ. ಇವೆರಡು ಕಾದಾಟಕ್ಕೆ ಇಳಿದರೆ ಹೇಗಿರಬಹುದು ಎಂಬುದು ಕುಂದಾಪುರ ತಾಲೂಕ್ ಯಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಕಂಡುಬಂದಿದೆ.
ದೈತ್ಯ ಹೆಬ್ಬಾವು-ಕಾಳಿಂಗ ಸರ್ಪದ ಕಾದಾಟ; ಕ್ಯಾಮೆರಾದಲ್ಲಿ ಸೆರೆಯಾಯ್ತು ರೋಚಕ ದೃಶ್ಯ.
ಮಡಿವಾಳಮಕ್ಕಿ ಶೇಖರ ಬೋವಿಯವರ ಮನೆಯ ಕೊಟ್ಟಿಗೆಯ ಪಕ್ಕದಲ್ಲಿ ಈ ಎರಡು ದೈತ್ಯ ಹಾವುಗಳು ಉರುಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ರೋಚಕ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ.
ಒಂದು ಹಂತದಲ್ಲಿ ಕಾಳಿಂಗ ಸರ್ಪವು ಹೆಬ್ಬಾವಿನ ಹೊಟ್ಟೆ ಭಾಗವನ್ನು ಬಹಳಷ್ಟು ಹೊತ್ತು ಕಚ್ಚಿ ಹಿಡಿದಿರುವುದು ವಿಡಿಯೋ ದೃಶ್ಯಗಳಲ್ಲಿ ದಾಖಲಾಗಿದೆ. ಬಳಿಕ ಅರಣ್ಯ ಇಲಾಖೆಯವರಿಗೆ ಕರೆ ಮಾಡಿದಾಗ ಸಿಬ್ಬಂದಿಗಳು ಬಂದು ಎರಡೂ ಹಾವುಗಳನ್ನು ಬಿಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.