ಉಡುಪಿ:ಕರ್ನಾಟಕ ಬ್ಯಾಂಕ್‌ನ ಲೀಗಲ್ ಆಫೀಸರ್ ಒಬ್ಬರ ಮೃತದೇಹವು ಅವರ ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾಜ್ ಗೋಪಾಲ್ ಸಾಮಗ (42) ಮೃತಪಟ್ಟವರೆಂದು ತಿಳಿದುಬಂದಿದೆ.
ಕೃಷ್ಣಮಠ ಸಮೀಪದ ವಾದಿರಾಜ ರಸ್ತೆಯಲ್ಲಿರುವ ಕೃಷ್ಣ ಸಾಮಗ ಅವರ ಮನೆಯಲ್ಲಿ ದಟ್ಟ ಹೊಗೆ ಕಂಡು ನೆರೆ ಮನೆಯವರು ವಿಷಯ ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತ ಮನೆಯವರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದರು. ಅಗ್ನಿಶಾಮಕ ದಳ ಹಾಗೂ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ನೋಡಿದಾಗ ಕೋಣೆಯ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು. ಈ ಸಂದರ್ಭದಲ್ಲಿ ಬಾಗಿಲು ಒಡೆದು ಪರಿಶೀಲಿಸಿದ್ದು ರಾಜ್ ಗೋಪಾಲ್ ಸಾಮಗ ಮೃತದೇಹ ಸುಟ್ಟ ಸ್ಥಿತಿಯಲ್ಲಿತ್ತು.