ಉಡುಪಿ: ಜಿಲ್ಲೆಯ ಪಶ್ಚಿಮ ಕರಾವಳಿಯ ಪ್ರಧಾನ ಆಕರ್ಷಣೆ ಮಲ್ಪೆ ಬೀಚ್. ಆದ್ರೆ ಮುಂಗಾರಿನ ಅಬ್ಬರ, ವಾಯು ಮಾರುತದ ಆರ್ಭಟಕ್ಕೆ ಈ ಬೀಚ್ ಕಣ್ಮರೆಯಾಗಿದೆ. ಇನ್ನೂ ಹತ್ತು ದಿನಗಳ ಕಾಲ ಪ್ರವಾಸಿಗರು ಮಲ್ಪೆ ಬೀಚ್ ನಿಂದ ದೂರವಿದ್ದರೆ ವಾಸಿ ಅಂತಿದಾರೆ ಕಡಲತೀರದ ನಿವಾಸಿಗಳು.
ಈ ರಾಕ್ಷಸ ಗಾತ್ರದ ಕಡಲಿನ ಅಲೆಗಳು ಮಲ್ಪೆ ಬೀಚ್ ಅನ್ನೇ ನುಂಗಿಹಾಕಿವೆ. ಸುಮಾರು 30 ಅಡಿಗಳಷ್ಟು ಬೀಚ್ನ ಭೂಭಾಗ ಸಮುದ್ರ ಪಾಲಾಗಿದೆ. ಕಡಲತಡಿಯಲ್ಲಿ ಲೋಡುಗಟ್ಟಲೇ ಕಸದ ರಾಶಿ ಬಿದ್ದಿದೆ. ಕರಾವಳಿ ತೀರಕ್ಕೆ ಮುಂಗಾರು ಅತಿಯಾದ ಅಬ್ಬರದಿಂದಲೇ ಪ್ರವೇಶಿಸಿದೆ. ಕಳೆದ ಎರಡು ದಿನಗಳಿಂದ ಮಾರುತಗಳ ಆರ್ಭಟ ಜೋರಾಗಿತ್ತು. ಇದೀಗ ಜಬರ್ ದಸ್ತ್ ಮಳೆಯ ಸಹಿತ ಮುಂಗಾರು ಎಂಟ್ರಿಕೊಟ್ಟಿದೆ. ಇದಕ್ಕೆಲ್ಲಾ ಕಾರಣ ಗುಜರಾತ್ನಲ್ಲಿ ಕಾಣಿಸಿಕೊಂಡಿರುವ ‘ವಾಯು’ ಚಂಡಮಾರುತ. ಈ ಚಂಡಮಾರುತದ ಪ್ರಭಾವ ಸ್ವಲ್ಪ ಪ್ರಮಾಣದಲ್ಲಿ ಮಲ್ಪೆ ಬೀಚ್ ಮೇಲೂ ಉಂಟಾಗುತ್ತಿದ್ದು, ನಾಲ್ಕಾರು ಅಡಿ ಎತ್ತರದ ಅಲೆಗಳು ನುಗ್ಗಿ ಬರುತ್ತಿವೆ.