ಉಡುಪಿ: ಫೋನ್ ಕದ್ದಾಲಿಕೆ ವಿಚಾರದಲ್ಲಿ ಯಾವುದೇ ರೀತಿಯ ತನಿಖೆಗೂ ಮುಕ್ತವಾಗಿದ್ದೇನೆ. ವೈಯಕ್ತಿಕವಾಗಿ ನನಗೆ ಯಾವುದೇ ಆತಂಕ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಯಾವುದೇ ತನಿಖೆ ಎದುರಿಸಲು ಸಿದ್ಧ: ಕುಮಾರಸ್ವಾಮಿ - political latest news
ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಬೇರೆ ದೇಶಗಳಿಂದ ತನಿಖಾ ಸಂಸ್ಥೆಗಳನ್ನು ಕರೆಸಿ ತನಿಖೆ ನಡೆಸಲಿ. ಆದರೆ, ನನ್ನ ಹೋರಾಟವನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ಧಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು,ಸಿದ್ದರಾಮಯ್ಯ ಸಲಹೆ ಪಡೆದು, ಸಿಬಿಐ ತನಿಖೆಗೆ ತುರ್ತಾಗಿ ನಿರ್ಧರಿಸಿರುವ ಯಡಿಯೂರಪ್ಪನವರು, ಆಪರೇಷನ್ ಕಮಲದ ಹೆಸರಲ್ಲಿನ ಸೂಟ್ ಕೇಸ್ ವ್ಯಾಪಾರವನ್ನು ಸಹ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.
ಅಲ್ಲದೆ, ಇದರ ಜತೆಗೆ ಹಿಂದಿನ 15 ವರ್ಷಗಳ ಎಲ್ಲಾ ಸರ್ಕಾರಗಳ ಅವಧಿಯಲ್ಲಿ ಏನಾಗಿದೆ ಎಂಬುದರ ಕುರಿತು ಸಿಬಿಐ ತನಿಖೆ ನಡೆಯಲಿ ಎಂದು ಕುಮಾರಸ್ವಾಮಿ ಹೇಳಿದರು. ಇನ್ನು ಅಮೆರಿಕ, ರಷ್ಯಾದಲ್ಲಿನ ಉನ್ನತ ಮಟ್ಟದ ತನಿಖಾ ಸಂಸ್ಥೆಗಳಿಂದಲೂ ತನಿಖೆ ನಡೆಸಲಿ. ನನ್ನ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲವೆಂದು ಸರ್ಕಾರಕ್ಕೆ ಸವಾಲು ಹಾಕಿದರು.