ಉಡುಪಿ:ರಾಜ್ಯ ಸರ್ಕಾರ ಲಾಕ್ಡೌನ್ನಲ್ಲಿ ಮತ್ತಷ್ಟು ಸಡಿಲಿಕೆ ಮಾಡಲು ಮುಂದಾಗಿದೆ. ಇದರಿಂದ ಹಸಿರು ವಲಯದಲ್ಲಿರುವ ಉಡುಪಿ ಜಿಲ್ಲಾಡಳಿತಕ್ಕೆ ಹೊಸ ಸವಾಲುಗಳು ಎದುರಾಗಿದೆ.
ಉಡುಪಿ ಜಿಲ್ಲಾಡಳಿತದಿಂದ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಜನರಿಗೆ ತವರಿಗೆ ಮರಳಲು ಸರ್ಕಾರ ಅವಕಾಶ ನೀಡಿದೆ. ಕೇಂದ್ರ ಸರ್ಕಾರದಿಂದ ಇನ್ನಷ್ಟೇ ಈ ಕುರಿತ ಗೈಡ್ಲೈನ್ಸ್ ಬರಬೇಕಾಗಿದೆ. ಆದರೂ ಜಿಲ್ಲಾ ಮಟ್ಟದಲ್ಲಿ ತಯಾರಿಗಳು ಬಿರುಸಾಗಿ ಆರಂಭವಾಗಿದೆ.
ಮಹಾರಾಷ್ಟ್ರದ ಮುಂಬೈನಿಂದ 10 ಸಾವಿರಕ್ಕೂ ಅಧಿಕ ಕಾರ್ಮಿಕರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಬರಲು ಸಜ್ಜಾಗಿದ್ದಾರೆ. ಹಾಗಾಗಿ ಅವರನ್ನು ಗಡಿಗಳಲ್ಲೇ ತಡೆದು ಪರಿಶೀಲಿಸಿ ಕೈಗೆ ಸೀಲ್ ಹಾಕಿಸಿ ಬರಮಾಡಿಕೊಳ್ಳುವ ಚಿಂತನೆ ನಡೆಯುತ್ತಿದೆ. ಗಡಿಯಲ್ಲಿ ಮತ್ತಷ್ಟು ಚೆಕ್ಪೋಸ್ಟ್ ಹೆಚ್ಚಿಸಲು ತಯಾರಿ ನಡೆಯುತ್ತಿದೆ. ಗಡಿಯಿಂದ ನೇರವಾಗಿ ಆಯಾ ಮನೆಗಳಲ್ಲೇ ಅವರನ್ನು ಕ್ವಾರಂಟೈನ್ ಮಾಡಿಸಲು ಸಿದ್ದತೆ ನಡೆಯುತ್ತಿದೆ.
ಬೆಂಗಳೂರು ಮತ್ತಿತರ ಹೊರ ಜಿಲ್ಲೆಗಳಿಂದ ಬರುವವರಿಗೂ 28 ದಿನಗಳ ಕ್ವಾರಂಟೈನ್ ಖಡ್ಡಾಯವಾಗಲಿದೆ. ಎಲ್ಲವೂ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಗೈಡ್ಲೈನ್ಗಳನ್ನು ಅವಲಂಬಿಸಿದೆ.