ಕರ್ನಾಟಕ

karnataka

ETV Bharat / state

ಕಟೀಲ್​ಗೆ ಪ್ರಮೋಷನ್ ಸಿಕ್ಕಿದೆ:  ರಮಾನಾಥ ರೈ ಹೀಗೇಕೆ ಅಂದ್ರು ಗೊತ್ತಾ?

ನಳೀನ್ ಕುಮಾರ್​ ಕಟೀಲ್​ ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನ‌ಕಾರಿಯಾಗಿ ಮಾತನಾಡಿದವರು. ಮೋದಿ, ಶಾ ಇದನ್ನು ಸಹಿಸಲ್ಲ ಅಂತ ಹೇಳಿದ್ದರು. ಅಂತವರಿಗೆ ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಟೀಕಿಸಿದರು.

ರಮನಾಥ ರೈ ಹಾಗೂ ನಳಿನ್ ಕುಮಾರ್ ಕಟೀಲ್​

By

Published : Aug 22, 2019, 2:15 PM IST

ಉಡುಪಿ: ನಳಿನ್ ಕುಮಾರ್ ಕಟೀಲ್​ಗೆ ಪ್ರಮೋಷನ್ ಆಗಿದೆ. ಮಹಾತ್ಮ ಗಾಂಧಿಗೆ ಅಪಮಾನ ಮಾಡಿದಕ್ಕೆ ಅಧ್ಯಕ್ಷಗಿರಿ ಸಿಕ್ಕಿದೆ ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯ ಮಾಡಿದ್ದಾರೆ.

ಉಡುಪಿಯಲ್ಲಿ ಮಾಜಿ ಸಚಿವ ರಮಾನಾಥ ರೈ ಮಾತನಾಡಿದರು.

ಉಡುಪಿಯಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಬಹಳ ಬುದ್ದಿವಂತರಿರಬಹುದು. ನಳೀನ್ ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನ‌ಕಾರಿಯಾಗಿ ಮಾತನಾಡಿದವರು. ಮೋದಿ, ಶಾ ಇದನ್ನು ಸಹಿಸಲ್ಲ ಅಂತ ಹೇಳಿದ್ದರು.ಈಗ ಅಂತಹವರಿಗೇ ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಟೀಕಿಸಿದರು.

ಭಾರತೀಯ ಜೂಟ್ ಪಾರ್ಟಿಗೆ ಮಾತ್ರ ಇಂತಹ ಶಕ್ತಿ ಇರುವುದು. ಜನ ನಳೀನ್ ಕುಮಾರ್ ಕಟೀಲ್ ಮುಖ ನೋಡಿ ವೋಟು ಕೊಟ್ಟಿಲ್ಲ. ಮೇಲಿನ‌ವರ ಮುಖ ನೋಡಿ ಮತ ಹಾಕಿದ್ದಾರೆ.

.

ನೆರೆ ಪರಿಸ್ಥಿತಿ ನಿಭಾಯಿಸೋದು ರಾಜ್ಯದ ಜೊತೆ ಕೇಂದ್ರದ ಹೊಣೆಗಾರಿಕೆ. ನೆರೆ ವೀಕ್ಷಣೆ ಮಾಡಲು ಪ್ರಧಾನಮಂತ್ರಿಗೆ ಟೈಮ್ ಇಲ್ವಾ? ಮೋದಿ‌ ಸರ್ಕಾರ ಪ್ರಚಾರದಲ್ಲೇ ಮಗ್ನವಾಗಿದೆ. ಬಿಜೆಪಿ ಜನಹಿತದ ಕಡೆ ಗಮನ ಕೊಡ್ತಾ ಇಲ್ಲ. ಮೋದಿಯ ಮಾರ್ಕೆಟಿಂಗ್ ಮಾಡುವ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದೆ. ಭೂತಾನ್​ಗೆ ಹೋಗಿ ಮಕ್ಕಳ ಬೆನ್ನು‌ತಟ್ಟಿದ್ರೆ ದೊಡ್ಡ ಸುದ್ದಿಯಾಗುತ್ತದೆ ಎಂದು ಹೇಳಿದರು.

ಇದಕ್ಕೂ ಮೊದಲು ಪ್ರವಾಹ ಪೀಡಿತ ಜನರ ಕಣ್ಣೀರು ಒರೆಸುವುದು ಅವರ ಆದ್ಯತೆಯಾಗಬೇಕಿತ್ತು. ಬುದ್ದಿವಂತರ ಜಿಲ್ಲೆಯಲ್ಲಿ ಯೋಗ್ಯ ಇಬ್ಬರನ್ನು ಮಂತ್ರಿ ಮಾಡುವುದಕ್ಕೆ ಬಿಜೆ‌ಪಿಗೆ ಸಾಧ್ಯವಾಗಿಲ್ಲ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬುದ್ದಿವಂತರು ಯಾರೂ ಇಲ್ಲ ಎಂದು ತೀರ್ಮಾನಿಸಿದಂತಿದೆ. ಎರಡು ಜಿಲ್ಲೆಯನ್ನು‌ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಮುಂದಿನ ಚುನಾವಣೆ ಲೆಕ್ಕಚಾರದಲ್ಲಿ‌‌ ಸಚಿವ ಸ್ಥಾನ‌ ಹಂಚಿಕೆ ಮಾಡಿದ್ದಾರೆ. ಬಿಜೆಪಿಯ ಈ ಲೆಕ್ಕಾಚಾರ ಉಲ್ಟಾ ಆಗುತ್ತದೆ. ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಅವರು ಟೀಕಿಸಿದ್ದಾರೆ.

ABOUT THE AUTHOR

...view details