ಕರ್ನಾಟಕ

karnataka

ETV Bharat / state

ಜಾತಿಗಣತಿ ವರದಿ ಸರ್ಕಾರ ಬಿಡುಗಡೆ ಮಾಡಬೇಕು: ಡಾ.ಜಿ ಪರಮೇಶ್ವರ್​ ಆಗ್ರಹ - ವಿಧಾನಸಭೆ ಕಲಾಪ

ಸದ್ಯದಲ್ಲೇ ಅಧಿವೇಶನ ಆರಂಭವಾಗುತ್ತಿದ್ದು, ಸದನದಲ್ಲಿ ಯಾವ ವಿಚಾರವಾಗಿ ಚರ್ಚಿಸಬೇಕೆಂಬುದನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗುವುದು. ಬಿಜೆಪಿ ವೈಫಲ್ಯವನ್ನ ಜನರ ಮುಂದಿಡಲಿದ್ದೇವೆ ಎಂದಿದ್ದಾರೆ.

dr-g-parameshwar-react-on-caste-census-result
ಡಾ.ಜಿ ಪರಮೇಶ್ವರ್​

By

Published : Sep 8, 2021, 10:08 AM IST

ಉಡುಪಿ: ಜಾತಿಗಣತಿಗೆ ಸುಮಾರು 150 ಕೋಟಿ ರೂಪಾಯಿ ಖರ್ಚಾಗಿದೆ. ಸರ್ಕಾರದ ಹಣ ಖರ್ಚು ಮಾಡಿ ವರದಿ ಸಿದ್ದಪಡಿಸಿದ್ದಾರೆ, ಹೀಗಾಗಿ ಆ ವರದಿಯನ್ನ ಹೊರತರಬೇಕು ಎಂದು ಉಡುಪಿಯಲ್ಲಿ ಡಾ.ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ.

ನಮ್ಮ ಸರ್ಕಾರ ಇದ್ದಾಗ ವರದಿ ಸಂಪೂರ್ಣ ಆಗಿರಲಿಲ್ಲ. ಹೀಗಾಗಿ ಅದನ್ನು ಹೊರತರಲು ಆಗಿರಲಿಲ್ಲ. ಕಾಂತರಾಜ್ ಅವರು ಈಗ ವರದಿಯನ್ನು ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಕೈಯಲ್ಲಿರುವ ವರದಿಯನ್ನು ಅಸೆಂಬ್ಲಿಯಲ್ಲಿ ಚರ್ಚೆ ಮಾಡಲಿ. ವರದಿಯಲ್ಲಿ ನ್ಯೂನತೆ ಇದ್ದರೆ ಸರಿಪಡಿಸುವ ತೀರ್ಮಾನ ಕೈಗೊಳ್ಳಲಿ. ವರದಿ ಬಹಿರಂಗ ಮಾಡುವುದರಿಂದ ಸರಕಾರಕ್ಕೆ ಮುಜುಗರ ಏನಿದೆ. ಯಾವುದೇ ಸಮುದಾಯ ಹೆಚ್ಚಿರುವುದು, ಕಡಿಮೆ ಇರುವುದು ಸ್ವಾಭಾವಿಕ ಎಂದರು.

ಜಾತಿಗಣತಿ ವರದಿಯನ್ನ ಸರ್ಕಾರ ಹೊರತರಬೇಕು: ಡಾ.ಜಿ ಪರಮೇಶ್ವರ್​

ಮಹಾನಗರ ಪಾಲಿಕೆ ಚುನಾವಣೆ ಕಾಂಗ್ರೆಸ್​​ಗೆ ಹಿನ್ನಡೆ ವಿಚಾರ ಮಾತನಾಡಿ, ಡಿಕೆಶಿ - ಸಿದ್ದರಾಮಯ್ಯ ಚುನಾವಣೆಯಲ್ಲಿ ಹೆಚ್ಚು ಭಾಗವಹಿಸಿಲ್ಲ. ಇದು ಚರ್ಚಿಸಬೇಕಾದ ದೊಡ್ಡ ವಿಚಾರ ಅಲ್ಲ. ಸ್ಥಳೀಯ ನಾಯಕರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ನನ್ನ ಅವಶ್ಯಕತೆ ಇದ್ದಲ್ಲಿ ನಾನು ಕೆಲಸ ಮಾಡುತ್ತೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಕಾಂಗ್ರೆಸ್​ನಲ್ಲಿ ಯಾವ ಗುಂಪುಗಾರಿಕೆಯೂ ಇಲ್ಲ. ಇಂತಹ ಸುದ್ದಿಯನ್ನ ಯಾರೋ ಸೃಷ್ಟಿ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರಿಗೂ ಪಕ್ಷದ ಜವಾಬ್ದಾರಿಯಿದೆ. ಗುಂಪುಗಾರಿಕೆ ಮಾಡುವ ಅವಕಾಶ ಕಾಂಗ್ರೆಸ್​​ನಲ್ಲಿ ಇಲ್ಲ. ಕಾಂಗ್ರೆಸ್​​​ನಲ್ಲಿ ಬಾಗಿಲುಗಳ ಕಲ್ಪನೆ ಯಾರದ್ದೊ ಸೃಷ್ಟಿ. ಪಕ್ಷ ಸಂಘಟನೆ ಮಾಡುವಲ್ಲಿ ಸಿದ್ದರಾಮಯ್ಯ ಡಿಕೆಶಿಗೆ ಜವಾಬ್ದಾರಿಯಿದೆ ಎಂದರು.

ಓದಿ:ಹಾಸ್ಯ ನಟ ಬುಲೆಟ್ ಪ್ರಕಾಶ್ ಮಗನ ಮೇಲೆ‌ ಮಂಗಳಮುಖಿಯರಿಂದ ದಾಳಿ ?

ABOUT THE AUTHOR

...view details