ಕರ್ನಾಟಕ

karnataka

ETV Bharat / state

ನಾಳೆಯಿಂದ ಎಸ್​​​ಎಸ್​​​ಎಲ್​​ಸಿ ಪರೀಕ್ಷೆ.. ಎಲ್ಲಾ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

ಜೂನ್​ 25ರಂದು ನಡೆಯಲಿರುವ ಎಸ್​​ಎಸ್​ಎಲ್​ಸಿ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ..

District collector visit sslc exam center
ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

By

Published : Jun 24, 2020, 9:27 PM IST

ಉಡುಪಿ :ಎಸ್​​​ಎಸ್​​ಎಲ್​​ಸಿ ಪರೀಕ್ಷೆ ಹಿನ್ನೆಲೆ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಯಾನಿಟೈಸರ್​​​ ಸಿಂಪಡಿಸಲಾಗಿದೆ. ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್​​​ಗೆ ವ್ಯವಸ್ಥೆ ಮಾಡಲಾಗಿದೆ. ಕ್ವಾರಂಟೈನ್ ಸೆಂಟರ್‌ ಆಗಿದ್ದ ಮೂರು ಶಾಲೆಗಳಿವೆ. ತಿಂಗಳ ಹಿಂದೆಯೇ ಕ್ವಾರಂಟೈನ್ ಕೇಂದ್ರ ತೆರವುಗೊಳಿಸಿ ಸ್ಯಾನಿಟೈಸರ್​​​ ಸಿಂಪಡಿಸಲಾಗಿದೆ. ಪ್ರತಿ ಪರೀಕ್ಷೆಯ ನಂತರ ಸ್ಯಾನಿಟೈಸ್ ಮಾಡಲಾಗುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ಶೆಲ್ಟರ್ ವ್ಯವಸ್ಥೆ ಇಲ್ಲ. ಮಕ್ಕಳು ಬಂದ ತಕ್ಷಣ ಜ್ವರ ಪರೀಕ್ಷಿಸಿ ತರಗತಿಯೊಳಗೆ ಕಳಿಸುತ್ತೇವೆ. ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಬೇಡ. ಮಕ್ಕಳು ಧೈರ್ಯವಾಗಿ ಬಂದು ಪರೀಕ್ಷೆ ಬರೆಯಿರಿ. ಯಾವುದೇ ಕೆಎಸ್​​​ಆರ್​​​ಟಿಸಿ ಬಸ್ ಬಳಸುತ್ತಿಲ್ಲ.

ಜಿಲ್ಲಾಧಿಕಾರಿ ಭೇಟಿ ನೀಡಿ SSLC ಪರೀಕ್ಷಾ ಸಿದ್ಧತೆ ಪರಿಶೀಲನೆ

ಖಾಸಗಿ ಶಾಲೆಯ 82 ಬಸ್ ಬಳಸುತ್ತೇವೆ. ಡೀಸೆಲ್ ವ್ಯವಸ್ಥೆ ಸರ್ಕಾರ ಮಾಡಲಿದೆ. ನಾಲ್ವರು ಮಕ್ಕಳು ಕಂಟೇನ್​​ಮೆಂಟ್ ಝೋನ್​​​ನಿಂದ ಬರಲಿದ್ದಾರೆ. ಅವರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದೇವೆ. ಹತ್ತು ಪರೀಕ್ಷಾ ಕೇಂದ್ರ ಹೆಚ್ಚುವರಿ ಮೀಸಲಿಟ್ಟಿದ್ದೇವೆ ಎಂದು ಜಿ.ಜಗದೀಶ್ ಹೇಳಿದ್ದಾರೆ.

ABOUT THE AUTHOR

...view details