ಉಡುಪಿ : ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಜಿಲ್ಲೆಯ ನಾಗ ದೇವಾಲಯಗಳಲ್ಲಿ ವಿಶೇಷ ರೀತಿಯಲ್ಲಿ ನಾಗರಾಧನೆ ನಡೆಯುತ್ತಿದೆ.
ಈ ಹಿಂದಿನ ವರ್ಷಗಳಲ್ಲಿ ಷಷ್ಠಿಯಂದು ಮಡೆಸ್ನಾನ ನಡೆಸಲಾಗುತ್ತಿತ್ತು. ಈ ಬಗ್ಗೆ ವಿವಾದ ತಲೆದೋರಿದ ಹಿನ್ನೆಲೆ, ಪೇಜಾವರ ಮಠದ ವಿಶ್ವೇಶ ತೀರ್ಥರು ಎಡೆ ಸ್ನಾನ ನಡೆಸಲು ಸಲಹೆ ನೀಡಿದ್ದರು. ಹೀಗಾಗಿ, ಎಂಜಲೆಲೆಯ ಮೇಲೆ ಉರುಳು ಸೇವೆ ನಡೆಸುವುದಕ್ಕೆ ಬದಲಾಗಿ ದೇವರ ಪ್ರಸಾದವನ್ನು ಇಟ್ಟು, ಅದರ ಮೇಲೆ ಉರುಳು ಸೇವೆ ನಡೆಸುವ ಸಂಪ್ರದಾಯ ಚಾಲ್ತಿಗೆ ಬಂತು.