ಕಾರ್ಕಳ :ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ನಡುವಿನ ವೈಯಕ್ತಿಕ ಜಗಳಕ್ಕೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಯಾಲಜಿ ಪರಿಕರಗಳು ನಾಶವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೊಸದಾಗಿ ಕಾಲೇಜಿಗೆ ವರ್ಗವಾಗಿರುವ ಬಯೋಲಜಿ ಶಿಕ್ಷಕಿಯನ್ನು ಎತ್ತಂಗಡಿ ಮಾಡಲು ಲ್ಯಾಬ್ ನಾಶ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಬಯಾಲಜಿ ಶಿಕ್ಷಕಿ ಜಯಶ್ರೀ ಹೆಗ್ಡೆಯವರನ್ನು ಈ ಕಾಲೇಜಿನಿಂದ ವರ್ಗಾವಣೆಗೊಳಿಸಲು ಹಾಗೂ ಅವರ ಮೇಲಿನ ವೈಯಕ್ತಿಕ ದ್ವೇಷ ಸಾಧನೆಗಾಗಿ ಇಂತಹ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಪ್ರಾಶುಂಪಾಲ ಮಾಧವ್ ಭಟ್ ಪ್ರತಿಕ್ರಿಯಿಸಿ, ಇದನ್ನು ನಾವು ಮಾಡಿಲ್ಲ ಬದಲಾಗಿ ಬೆಕ್ಕುಗಳ ಉಪಟಳದಿಂದ ನಡೆದಿದೆ ಎಂದಿದ್ದಾರೆ.
ಬೆಕ್ಕುಗಳಿಂದ ಗಾಜುಗಳು ಒಡೆದು ಹೋಗಬಹುದು. ಅದರೆ, ಮೈಕ್ರೋ ಸ್ಕೋಪ್ ಸೇರಿದಂತೆ ಹಲವಾರು ದಾಖಲೆಗಳು ಮಾಯವಾಗಲು ಹೇಗೆ ಸಾಧ್ಯ ಎಂದು ಬಯೋಲಜಿ ಶಿಕ್ಷಕಿ ಜಯಶ್ರೀ ಹೇಳುತ್ತಾರೆ.