ಕರ್ನಾಟಕ

karnataka

ETV Bharat / state

ಶ್ರೀಶಂಕರ ಸೇವಾ ಸಮಿತಿಯಿಂದ ದೇವಾಲಯಕ್ಕೆ ವಂಚನೆ: ಲೆಕ್ಕಪರಿಶೋಧಕರ ಆರೋಪ - Sri Sankara Seva Samiti

ಶಂಕರ ಮಠದಲ್ಲಿ ಶ್ರೀ ಶಂಕರ ಸೇವಾ ಸಮಿತಿ ಸಭಾಭವನ ಬಾಡಿಗೆ ಪಡೆಯುವವರಿಗೆ ಅಧಿಕೃತ ರಸೀತಿ ನೀಡದೇ ಬಿಳಿ ಚೀಟಿ ನೀಡಿ ಅವ್ಯವಹಾರ ನಡೆಸುತ್ತಿದೆ ಎಂದು ಲೆಕ್ಕಪರಿಶೋಧಕ ಶ್ರೀನಿವಾಸ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿ

By

Published : Sep 10, 2019, 9:07 AM IST

ತುಮಕೂರು: ನಗರದ ಭದ್ರಮ್ಮ ವೃತ್ತದಲ್ಲಿರುವ ಶೃಂಗೇರಿ ಶಂಕರಮಠದ ನಿರ್ವಹಣೆಗೆ ಸ್ಥಾಪನೆಯಾದ ಶ್ರೀ ಶಂಕರ ಸೇವಾ ಸಮಿತಿ ದೇವಾಲಯಕ್ಕೆ ಬರುತ್ತಿರುವ ಆದಾಯ ಕುರಿತು ಯಾವುದೇ ಲೆಕ್ಕಪತ್ರ ನೀಡದೇ ವಂಚಿಸಲಾಗುತ್ತಿದೆ ಎಂದು ಲೆಕ್ಕಪರಿಶೋಧಕ ಶ್ರೀನಿವಾಸ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೆಕ್ಕಪರಿಶೋಧಕ ಶ್ರೀನಿವಾಸ್ ರಾವ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯು ದೇವಾಲಯದ ಸಭಾಭವನ ಬಾಡಿಗೆ ಪಡೆಯುವವರಿಗೆ ಅಧಿಕೃತ ರಸೀದಿ ನೀಡದೆ ಬಿಳಿ ಚೀಟಿ ನೀಡಿ ಅವ್ಯವಹಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಮಿತಿಯನ್ನು ಈಗಾಗಲೇ ವಿಸರ್ಜಿಸಲಾಗಿದ್ದರೂ ಸಹ ಅಕ್ರಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ, ಈ ಕೂಡಲೇ ಜಿಲ್ಲಾಡಳಿತ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಸರ್ಜಿತ ಶ್ರೀ ಶಂಕರ ಸೇವಾ ಸಮಿತಿಯಲ್ಲಿ ಐದು ಮಂದಿ ಸದಸ್ಯತ್ವಕ್ಕೆ ಸಹಕಾರ ಸಂಘಗಳ ಇಲಾಖೆಯಿಂದ ಅನುಮೋದನೆ ದೊರೆತಿಲ್ಲ. ಹೀಗಿದ್ದರೂ 50 ಸದಸ್ಯರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಮೂಲಕ ಸಹಕಾರ ಸಂಘಗಳ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details