ತುಮಕೂರು: ಪಾಳು ಬಾವಿಗೆ ಬಿದ್ದಿದ್ದ ಪುನುಗು ಬೆಕ್ಕನ್ನು ವನ್ಯಜೀವಿ ಕಾರ್ಯಕರ್ತರು ರಕ್ಷಿಸಿರುವ ಘಟನೆ ಜೆಲ್ಲೆಯ ಶಿರಾ ತಾಲೂಕಿನ ಅಮಲಗೊಂದಿ ಗ್ರಾಮದಲ್ಲಿ ನಡೆದಿದೆ.
ಪಾಳು ಬಾವಿಗೆ ಬಿದ್ದ ಪುನುಗು ಬೆಕ್ಕು... ವನ್ಯಜೀವಿ ಕಾರ್ಯಕರ್ತರಿಂದ ರಕ್ಷಣೆ - Protection
ತುಮಕೂರು ಜೆಲ್ಲೆಯ ಶಿರಾ ತಾಲೂಕಿನ ಅಮಲಗೊಂದಿ ಗ್ರಾಮದಲ್ಲಿ ಮಂಜು ಪ್ರಸಾದ್ ಎಂಬುವರಿಗೆ ಸೇರಿದ ತೋಟದ ತೆರೆದ ಬಾವಿಗೆ ಪುನುಗು ಬೆಕ್ಕು ಬಿದ್ದಿದ್ದು, ಅದನ್ನು ವನ್ಯಜೀವಿ ಜಾಗೃತಿ ಮತ್ತು ಉರಗ ಸಂರಕ್ಷಣಾ ಸಂಸ್ಥೆಯ ಕಾರ್ಯಕರ್ತರು ರಕ್ಷಿಸಿದ್ದಾರೆ.
ಪುನುಗು ಬೆಕ್ಕು
ಮಂಜು ಪ್ರಸಾದ್ ಎಂಬುವರಿಗೆ ಸೇರಿದ ತೋಟದ ತೆರೆದ ಬಾವಿಗೆ ಪುನುಗು ಬೆಕ್ಕು ಬಿದ್ದು ಹೊರ ಬರಲಾರದೆ ಒದ್ದಾಡುತ್ತಿತ್ತು. ಆಹಾರ ಅರಸಿ ತೋಟಕ್ಕೆ ಬಂದಿದ್ದ ಬೆಕ್ಕು ಭಯದಿಂದ ಬಾವಿಯಲ್ಲಿರುವ ಕಸದ ನಡುವೆ ಅವಿತು ಕುಳಿತಿತ್ತು. ಇದನ್ನು ನೋಡಿದ ಮಂಜುಪ್ರಸಾದ್, ಬಾವಿಯೊಳಗೆ ಏಣಿ ಇರಿಸಿದ್ದರೂ ಅದು ಮೇಲೆ ಬಂದಿರಲಿಲ್ಲ.
ತಕ್ಷಣ ವಿಷಯವನ್ನು ತುಮಕೂರಿನ ವನ್ಯಜೀವಿ ಜಾಗೃತಿ ಮತ್ತು ಉರಗ ಸಂರಕ್ಷಣಾ ಸಂಸ್ಥೆಯ ಕಾರ್ಯಕರ್ತರಿಗೆ ತಿಳಿಸಿದರು. ಕೊನೆಗೂ ವನ್ಯಜೀವಿ ಜಾಗೃತಿ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಬೆಕ್ಕನ್ನು ರಕ್ಷಿಸಿದ್ದಾರೆ.