ಕರ್ನಾಟಕ

karnataka

ETV Bharat / state

ತುಮಕೂರಿನಲ್ಲಿ ಪ್ರತ್ಯೇಕ ರಸ್ತೆ ಅಪಘಾತ.. ದಂಪತಿ ಸೇರಿ ಮೂವರ ದುರ್ಮರಣ.. - etv bharat

ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ದಂಪತಿ ಸೇರಿ ಮೂವರು ಮೃತಪಟ್ಟ ಘಟನೆ ನಡೆದಿದೆ.

ಪ್ರತ್ಯೇಕ ರಸ್ತೆ ಅಪಘಾತ

By

Published : Jul 2, 2019, 10:56 AM IST

ತುಮಕೂರು :ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ವಾಹನದಿಂದ ಮೃತದೇಹವನ್ನು ಹೊರತೆಗೆಯುತ್ತಿರುವ ಸ್ಥಳೀಯರು

ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮುಂಜಾನೆ ಲಾರಿಗೆ ಹಿಂದಿನಿಂದ ಬಂದ ಟಾಟಾ ಏಸ್ ವಾಹನ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಟಾಟಾ ಏಸ್​ನಲ್ಲಿದ್ದ ಪತಿ-ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆಂಕಟೇಶಪ್ಪ (42), ರುಕ್ಮಿಣಿ (35) ಎಂಬುವರು ಮೃತ ದಂಪತಿ ಎಂದು ತಿಳಿದುಬಂದಿದೆ.

ವಾಹನದಲ್ಲೇ ಮೃತಪಟ್ಟ ಮಹಿಳೆ

ಇನ್ನೊಂದೆಡೆ ಶಿರಾ-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರ ತರೂರು ಗೇಟ್ ಬಳಿ ಟ್ರ್ಯಾಕ್ಟರ್​ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರ್ಯಾಕ್ಟರ್​ನಲ್ಲಿದ್ದ ಆಮಲಗೊಂದಿಯ ವೆಂಕಟೇಶ್ (45) ಮೃತಪಟ್ಟಿದ್ದಾರೆ. ಎರಡು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details