ಬಳ್ಳಾರಿ: ರಾಬಕೋ (ರಾಯಚೂರು, ಬಳ್ಳಾರಿ, ಕೊಪ್ಪಳ) ಹಾಲು ಒಕ್ಕೂಟದ ನಿರ್ದೇಶಕ ಚುನಾವಣೆಗೆ ಬುಧವಾರ ಮೂರು ನಾಮಪತ್ರಗಳು ಸಲ್ಲಿಕೆಯಾಗಿದೆ. ಏ.03 ರಂದು ಚುನಾವಣೆ ನಡೆಯಲಿದೆ.
ಒಕ್ಕೂಟದ ಚುನಾವಣೆ ಈ ಮುಂಚೆ ಏ.03 ರಂದು ನಿಗದಿಪಡಿಸಲಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆ ಮೇ.05ಕ್ಕೆ ಮುಂದೂಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಹೀಗಾಗಿ ಸಿಂಧನೂರು, ಮಾನ್ವಿ ತಾಲೂಕಿನ ಒಕ್ಕೂಟದ ಕೆಲ ನಿರ್ದೇಶಕರು ಕಲಬುರಗಿ ಹೈಕೋರ್ಟ್‌ಗೆ ತೆರಳಿ ನಿಗದಿಯಾಗಿದ್ದ ದಿನಾಂಕ ದಂದೆ ಚುನಾವಣೆ ನಡೆಸುವಂತೆ ಕೋರಿದ್ದು ಹೈಕೋರ್ಟ್ ಸಮ್ಮತಿಸೂಚಿಸಿದೆ. ಈ ಹಿನ್ನೆಲೆ ಬುಧವಾರದಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.ರಾಬಕೊ ಹಾಲು ಒಕ್ಕೂಟದ ನಿರ್ದೇಶಕರ 12 ಸ್ಥಾನಗಳಲ್ಲಿ ಬಳ್ಳಾರಿ ಜಿಲ್ಲೆಯ ನಾಲ್ಕು ಸ್ಥಾನಗಳಿಗೆ ಬುಧವಾರ ಮೂರು ನಾಮಪತ್ರ ಸಲ್ಲಿಕೆಯಾದವು.