ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಇಂದು 138 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿ ಪರೀಕ್ಷೆಗೆ ರವಾನೆ

ರಾಯಚೂರಿನಲ್ಲಿ ಇದುವರೆಗೂ ಕಳುಹಿಸಲಾಗಿದ್ದ 2,066 ಜನರ ರಕ್ತದ ಮಾದರಿಗಳ ಪೈಕಿ 1,660 ವರದಿ ನೆಗೆಟಿವ್ ಬಂದಿವೆ. ಇಂದು ಮತ್ತೆ ಹೊಸದಾಗಿ 138 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ರಾಯಚೂರಿನಲ್ಲಿ ಇಂದು 138 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿ ಪರೀಕ್ಷೆಗೆ ರವಾನೆ

By

Published : May 7, 2020, 10:25 PM IST

ರಾಯಚೂರು: ಜಿಲ್ಲೆಯಿಂದ ಇಂದು 138 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಈ ಬಗ್ಗೆ ಜಿಲ್ಲಾಡಳಿತ ಪ್ರಕಟಣೆ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಇದುವರೆಗೂ ಕಳುಹಿಸಲಾಗಿದ್ದ 2,066 ಜನರ ರಕ್ತದ ಮಾದರಿಗಳ ಪೈಕಿ 1,660 ವರದಿ ನೆಗೆಟಿವ್ ಬಂದಿವೆ. ಇದುವರೆಗೆ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದ ರಕ್ತದ ಮಾದರಿಗಳಲ್ಲಿ ಇನ್ನೂ 263 ಜನರ ವರದಿ ಬರುವುದು ಬಾಕಿ ಇದೆ. ಫೀವರ್ ಕ್ಲಿನಿಕ್‌ಗಳಲ್ಲಿ ಇಂದು 592 ಜನರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಇದುವರೆಗೂ 6,858 ಜನರ ತಪಾಸಣೆ ನಡೆಸಿದಂತಾಗಿದೆ.


ಕೊರೊನಾ ಶಂಕಿತ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಒಪೆಕ್ ಆಸ್ಪತ್ರೆಯಲ್ಲಿ ಇದುವರೆಗೂ 84 ಜನರಿಗೆ ಚಿಕಿತ್ಸೆ ನಡೆಸಲಾಗಿದ್ದು, ಅದರಲ್ಲಿ 80 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹೊರ ರಾಜ್ಯದಿಂದ ಆಗಮಿಸಿದ 972 ಜನರನ್ನು ಸರ್ಕಾರಿ ಕಟ್ಟಡದಲ್ಲಿ ಇರಿಸಲಾಗಿದ್ದು, ಆ ಪೈಕಿ 817 ಜನರನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ 155 ಜನರನ್ನು ಅಲ್ಲಿಯೇ ಕ್ವಾರಂಟೈನ್​ನಲ್ಲಿ ಇಡಲಾಗಿದೆ​ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details