ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ಜಗಳ: ಪತಿ ಮೇಲೆ ಬಿಸಿ ಸಾಂಬಾರ್ ಸುರಿದ ಪತ್ನಿ! - ತುಮಕೂರು ಗಂಡ ಹೆಂಡತಿ ಜಗಳದ ಸುದ್ದಿ

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಪತಿ-ಪತ್ನಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಮಹಿಳೆಯೊಬ್ಬಳು ತನ್ನ ಪತಿ ಮೇಲೆ ಬಿಸಿ ಸಾಂಬಾರ್​​ ಸುರಿದಿದ್ದಾಳೆ.

Quarrel between husband and wife at Tumkur
ಪತಿಯ ಮೇಲೆ ಬಿಸಿ ಸಾಂಬಾರ್ ಸುರಿದ ಪತ್ನಿ

By

Published : May 16, 2020, 5:15 PM IST

ತುಮಕೂರು: ಕ್ಷುಲ್ಲಕ ಕಾರಣಕ್ಕೆ ಪತಿಯ ಮೇಲೆ ಪತ್ನಿಯೇ ಬಿಸಿ ಸಾಂಬಾರ್ ಸುರಿದಿರುವ ವಿಚಿತ್ರ ಪ್ರಕರಣ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.

ಪತ್ನಿ ಕೃತ್ಯದಿಂದ ಘಟನೆಯಲ್ಲಿ ಗಾಯಗೊಂಡ ಪತಿ

ರಂಗಾಪುರ ಗ್ರಾಮದ ನಿವಾಸಿ ಗಂಗಾಧರ್ ಗಾಯಗೊಂಡಿರುವ ವ್ಯಕ್ತಿ. ಈತ ಕೂಲಿ ಕೆಲಸ ಮಾಡಿಕೊಂಡಿದ್ದಾನೆ. ಕಳೆದೆರಡು ದಿನಗಳ ಹಿಂದೆ ಪತಿ-ಪತ್ನಿಯ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿತ್ತು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಾಗ ಗಂಗಾಧರ್ ಮೇಲೆ ಪತ್ನಿ ಕುದಿಯುತ್ತಿದ್ದ ಸಾಂಬಾರ್​ ತಂದು ಸುರಿದಿದ್ದಾಳೆ.

ಘಟನೆಯಲ್ಲಿ ಗಂಗಾಧರ್​ಗೆ ಮುಖ ಸೇರಿದಂತೆ ದೇಹದ ಕೆಲವು ಭಾಗಗಳು ಸುಟ್ಟು ಹೋಗಿದ್ದು, ಆತನೀಗ ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details