ಕರ್ನಾಟಕ

karnataka

ETV Bharat / state

ನೂತನ ದೇಗುಲ ಪ್ರವೇಶಿಸಲು 2 ಗುಂಪಿನ ನಡುವೆ ಗಲಾಟೆ...ಪೊಲೀಸರಿಂದ ಲಘು ಲಾಠಿ ಪ್ರಹಾರ - ಲಘು ಲಾಠಿ ಪ್ರಹಾರ

ಮಾರಮ್ಮ ದೇಗುಲಕ್ಕೆ ಮೊದಲು ಪ್ರವೇಶಿಸಬೇಕೆಂದು ಎರಡು ಗುಂಪಿನ ಮುಖಂಡರು ಹಠ ಹಿಡಿದರು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ನೂತನ ದೇಗುಲ

By

Published : May 28, 2019, 11:18 PM IST

ತುಮಕೂರು: ನೂತನವಾಗಿ ನಿರ್ಮಿಸಲಾಗಿರುವ ಮಾರಮ್ಮ ದೇಗುಲಕ್ಕೆ ಮೊದಲು ಪ್ರವೇಶ ಮಾಡಬೇಕು ಎಂಬ ವಿಚಾರದಲ್ಲಿ ಎರಡು ಗುಂಪಿನ ನಡುವೆ ಉಂಟಾದ ಗಲಾಟೆ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಇಂದ್ರಬೆಟ್ಟ ಗ್ರಾಮದಲ್ಲಿ ನಡೆದಿದೆ.

ಗಲಾಟೆ ವೇಳೆ ಎರಡು ಗುಂಪಿನ 100ಕ್ಕೂ ಹೆಚ್ಚು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಎರಡು ಗುಂಪಿನ ನಡುವೆ ಗಲಾಟೆ

ಮಾರಮ್ಮ ದೇಗುಲಕ್ಕೆ ಮೊದಲು ಪ್ರವೇಶಿಸಬೇಕೆಂದು ಎರಡು ಗುಂಪಿನ ಮುಖಂಡರು ಹಠ ಹಿಡಿದಿದ್ದರು. ಇದೇ ವಿಷಯವಾಗಿ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ಮಾರಮ್ಮ ದೇಗುಲದ ಬಳಿ ನಿಯೋಜಿಸಿದ್ದಾರೆ.

ABOUT THE AUTHOR

...view details