ಕರ್ನಾಟಕ

karnataka

ETV Bharat / state

ಯಾವುದೇ ಸಮುದಾಯದವರನ್ನು ಟಾರ್ಗೆಟ್​​ ಮಾಡಿಲ್ಲ: ಅಶ್ವಥ್​ ನಾರಾಯಣ್ - democracy

ದೇಶಕ್ಕೆ ಒಬ್ಬ ರಾಜನಾದ್ರೆ, ಊರಿಗೊಬ್ಬ ಗೌಡ. ಆ ದಾರಿಯಲ್ಲಿ ನಿಂತಿರುವವರು, ಎಲ್ಲರಿಗೂ ನಾಯಕತ್ವ ಕೊಡುವವರು ಒಕ್ಕಲಿಗರು ಎಂದು ಡಿಸಿಎಂ ಅಶ್ವಥ್​ ನಾರಾಯಣ್ ಹೇಳಿದ್ದಾರೆ.

ಡಿಸಿಎಂ ಅಶ್ವತ್ಥ್​ ನಾರಾಯಣ

By

Published : Sep 9, 2019, 1:35 PM IST

ತುಮಕೂರು: ಪ್ರಜಾಪ್ರಭುತ್ವ ಅಂದ್ರೆ ಜನರಿಂದ ಜನರಿಗಾಗಿ. ಆದರೆ ಈಗ ಜನರಿಂದ ನಾಯಕರಿಗೋಸ್ಕರ ಎಂಬಂತಾಗಿದೆ. ಸರ್ಕಾರ ಜನರ ಪರವಾಗಿ ಕೆಲಸ ಮಾಡಬೇಕು. ವ್ಯವಸ್ಥೆ ಇರೋದು ಜನರಿಗೋಸ್ಕರ ರಾಜಕಾರಣಿಗಳಿಗಾಗಿ ಅಲ್ಲ. ಬೇಲಿನೇ ಎದ್ದು ಹೊಲ ಮೇಯ್ದರೇ ಜನರು ಏನು ಮಾಡಬೇಕು ಎಂದು ಡಿಸಿಎಂ ಅಶ್ವಥ್​ ನಾರಾಯಣ್ ಪ್ರಶ್ನಿಸಿದ್ದಾರೆ.

ಯಾವುದೇ ಸಮುದಾಯದವರನ್ನು ಟಾರ್ಗೆಟ್​​ ಮಾಡಿಲ್ಲ: ಡಿಸಿಎಂ

ಇನ್ನು, ಯಾವುದೇ ಸಮುದಾಯದವರನ್ನು ಟಾರ್ಗೆಟ್​​ ಮಾಡಿಲ್ಲ. ಒಕ್ಕಲಿಗರ ಸಮುದಾಯ ಯಾವತ್ತೂ ನಾಡಿನ ನಾಯಕರಾದಂಥವರು. ದೇಶಕ್ಕೆ ಒಬ್ಬ ರಾಜನಾದ್ರೆ, ಊರಿಗೊಬ್ಬ ಗೌಡ. ಆ ದಾರಿಯಲ್ಲಿ ನಿಂತಿರುವವರು. ಎಲ್ಲರಿಗೂ ನಾಯಕತ್ವ ಕೊಡುವವರು ಒಕ್ಕಲಿಗರು ಎಂದು ಡಿಸಿಎಂ ಹೇಳಿದ್ರು.

ಈ ಸಂದರ್ಭದಲ್ಲಿ ತುರುವೆಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಹಾಜರಿದ್ದರು.

ABOUT THE AUTHOR

...view details