ಕರ್ನಾಟಕ

karnataka

By

Published : May 27, 2021, 10:09 AM IST

ETV Bharat / state

ತುಮಕೂರಿನಲ್ಲಿ ಆಕ್ಸಿಜನ್​ ಬೆಡ್​ಗಳಿಗೆ ಬೇಡಿಕೆ ತಗ್ಗಿದೆ: ಸಚಿವ ಮಾಧುಸ್ವಾಮಿ

ತುಮಕೂರಿನ ಆಸ್ಪತ್ರೆಗಳಿಗೆ ನೆರೆ ಜಿಲ್ಲೆಯ ಸೋಂಕಿತರು ಸಹ ಬಂದು ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆ ಆಕ್ಸಿಜನ್​ ಬೆಡ್​ಗಳಿಗೆ ಭಾರೀ ಬೇಡಿಕೆಯಿತ್ತು. ಆದ್ರೀಗ ಆಕ್ಸಿಜನ್ ಬೆಡ್​ಗಳು ಖಾಲಿ ಉಳಿದಿವೆ. ಜತೆಗೆ ಈಗಲೂ ನೆರೆ ಜಿಲ್ಲೆಯಿಂದ ಸೋಂಕಿತರು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.

madhuswamy
ಸಚಿವ ಮಾಧುಸ್ವಾಮಿ

ತುಮಕೂರು:ಕೋವಿಡ್​ ಎರಡನೇ ಅಲೆ ಆರಂಭದಲ್ಲಿ ಆಕ್ಸಿಜನ್​ ಬೆಡ್​ಗಳಿಗೆ ಭಾರೀ ಬೇಡಿಕೆಯಿತ್ತು. ಆದ್ರೀಗ ಆಕ್ಸಿಜನ್ ಬೆಡ್​ಗಳು ಖಾಲಿ ಉಳಿದುಕೊಂಡಿವೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.

ಸಚಿವ ಮಾಧುಸ್ವಾಮಿ

ಕೊರೊನಾ ಎರಡನೇ ಅಲೆ ಶುರುವಿನಲ್ಲಿ ಆಕ್ಸಿಜನ್ ಲಭ್ಯವಾಗದೇ ಸೋಂಕಿತರು ದಿಕ್ಕಾಪಾಲಾಗಿ ಹೋಗಿದ್ದರು. ಆಕ್ಸಿಜನ್ ಅಭಾವ ತುಮಕೂರು ಜಿಲ್ಲೆಯಲ್ಲಿ ಇಲ್ಲದಿದ್ದರೂ ಜಿಲ್ಲೆಗೆ ನೆರೆ ಜಿಲ್ಲೆಗಳಿಂದ ಸೋಂಕಿತರು ಬಂದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಹೆಚ್ಚಾಗಿತ್ತು. ಪ್ರಮುಖವಾಗಿ ಬೆಂಗಳೂರಿನಲ್ಲಿ ಬೆಡ್ ಮತ್ತು ಆಕ್ಸಿಜನ್ ಸಿಗದೆ ತುಮಕೂರಿಗೆ ಸೋಂಕಿತರು ಬರತೊಡಗಿದ್ದರು. ಇದ್ರಿಂದಾಗಿ ಪ್ರಾರಂಭದಲ್ಲಿ ಜಿಲ್ಲಾಡಳಿತಕ್ಕೂ ಆಕ್ಸಿಜನ್ ಅಭಾವ ಎದುರಾಗುವ ಆತಂಕವಿತ್ತು.

ಆದ್ರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಆಕ್ಸಿಜನ್ ಬೆಡ್​​ಗಳು ಖಾಲಿ ಉಳಿದುಕೊಂಡಿವೆ. ಆಕ್ಸಿನೇಟೆಡ್ ಬೆಡ್​ಗಳಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರು ಇಲ್ಲದಂತಾಗಿದೆ. ಹೀಗಾಗಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ 19 ಆಕ್ಸಿನೇಟೆಡ್ ಬೆಡ್​ಗಳು, ಖಾಸಗಿ ಆಸ್ಪತ್ರೆಗಳಲ್ಲಿ 20 ಬೆಡ್​ಗಳು, ಎಬಿಆರ್​​​ಕೆ ಯಡಿ 30 ಬೆಡ್​ಗಳು ಖಾಲಿಯಾಗಿವೆ. ಆಕ್ಸಿನೇಟೆಡ್ ಬೆಡ್​​ಗಳಿಗೆ ಇದ್ದ ಒತ್ತಡ ಕಡಿಮೆಯಾಗಿದೆ. ಆದ್ರೆ ಐಸಿಯು ಬೆಡ್​ಗಳು ಖಾಲಿ ಉಳಿದಿಲ್ಲ.

ಇದನ್ನೂ ಓದಿ:ಕೊಪ್ಪಳದಲ್ಲಿ 550 ಹೊಸ ಕೋವಿಡ್ ಕೇಸ್: ಮೂವರು ಸೋಂಕಿತರು ಸಾವು

ಒಟ್ಟಾರೆ ಕೋವಿಡ್​ ಎರಡನೇ ಅಲೆಯ ಪ್ರಾರಂಭಿಕ ಹಂತದಲ್ಲಿ ಉಂಟಾಗಿದ್ದ ಆಕ್ಸಿನೇಟೆಡ್ ಬೆಡ್​ಗಳ ಕೊರತೆ ಜಿಲ್ಲೆಯಲ್ಲಿ ಸಂಪೂರ್ಣ ಇಲ್ಲದಂತಾಗಿದೆ. ಅಲ್ಲದೇ, ನೆರೆ ಜಿಲ್ಲೆಯಿಂದ ಸೋಂಕಿತರು ಇಂದಿಗೂ ಚಿಕಿತ್ಸೆ ಪಡೆಯಲು ಮುಂದೆ ಬರುತ್ತಿದ್ದಾರೆ.

ABOUT THE AUTHOR

...view details