ತುಮಕೂರು:ಸಾಲಬಾಧೆ ತಾಳಲಾರದೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಶವದ ಎದುರು ಶಿರಾ ಶಾಸಕ ಸತ್ಯನಾರಾಯಣ್ ನಿಂತಿರುವ ಫೋಟೋಗಳು ಸಾಕಷ್ಟು ಟೀಕೆಗೆ ಒಳಗಾಗಿದೆ.
ರೈತನ ಶವದ ಮುಂದೆ ಫೋಟೋ... ಟೀಕೆಗೆ ಗುರಿಯಾದ ಶಿರಾ ಶಾಸಕರು - ಶಿರಾ ಶಾಸಕ ಸತ್ಯನಾರಾಯಣ
ಜಮೀನಿನಲ್ಲಿ ನೇಣಿಗೆ ಶರಣಾಗಿದ್ದ ರೈತನ ಶವದ ಎದುರು ಶಿರಾ ಶಾಸಕ ಸತ್ಯನಾರಾಯಣ ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತುಮಕೂರು ಜಿಲ್ಲೆ ಶಿರಾ ತಾಲೂಕು ದೇವರಹಳ್ಳಿಯಲ್ಲಿ ಗ್ರಾಮದಲ್ಲಿ ರೈತ ಗಂಗಾಧರ್ (60) ಎಂಬುವರು ತಮ್ಮ ಜಮೀನಿನಲ್ಲಿದ್ದ ಮರಕ್ಕೆ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ರು. ವಿಷಯ ತಿಳಿದು ಸ್ಥಳಕ್ಕೆ ಶಿರಾ ಶಾಸಕ ಸತ್ಯನಾರಾಯಣ ಭೇಟಿ ನೀಡಿದ್ದರು. ಈ ವೇಳೆ ಶವದ ಮುಂದೆ ಇತರರೊಂದಿಗೆ ಶಾಸಕರು ಇದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಜನರಿಂದ ಆಕ್ರೋಶ ವ್ಯಕ್ತವಾಗಿದೆ.
4.17 ಎಕರೆ ಜಮೀನು ಹೊಂದಿರುವ ರೈತ ಗಂಗಾಧರ್ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಸಂಬಂಧಿಸಿದಂತೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.